ಜಿಲ್ಲೆ

ಉತ್ತಮ ಫಲಿತಾಂಶಕ್ಕೆ ಪಾಲಕರ ಸಹಕಾರ ಅಗತ್ಯ

Mysuru - Desk - Naveen Kumar H P
  • ಕೊಡಗು : ಉತ್ತಮ ಫಲಿತಾಂಶ ಗಳಿಸಲು ಶಿಕ್ಷಕರ ಜತೆ ವಿದ್ಯಾರ್ಥಿಗಳ ಪಾಲಕರ ಪಾತ್ರವೂ ಬಹಳ ಮುಖ್ಯ ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಹೇಳಿದರು. ಕೆಪಿಎಸ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳೊಂದಿಗೆ ತಾಯಂದಿರು ಹೆಚ್ಚಿನ ಸಮಯ ಕಳೆಯಬೇಕು. ಈ ಮೂಲಕ ತಮ್ಮ ಮಕ್ಕಳು ಬೇಗ ಎದ್ದು ಓದುವುದನ್ನು ಅಭ್ಯಾಸ ಮಾಡಿಸಬೇಕು. ಓದಿನೊಂದಿಗೆ ಆರೋಗ್ಯವೂ ಕೂಡ ಅಷ್ಟೇ ಪ್ರಮುಖವಾಗಿದ್ದು, ಉತ್ತಮ ಆರೋಗ್ಯಕ್ಕೂ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ, ಬಿ.ಆರ್.ಪಿ. ಮಂಜುಳಾ ಚಿತ್ರಾಪುರ, ಕೆಪಿಎಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಶಿವಣ್ಣ ಉಪಸ್ಥಿತರಿದ್ದರು.