ಜಿಲ್ಲೆ

ಪಾಲಕರ ಜಾಗೃತಿ ಮಕ್ಕಳ ಅಭಿವೃದ್ಧಿಗೆ ಮುನ್ನುಡಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಶಂಕರನಾರಾಯಣ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಪ್ರಮುಖ. ಆಧುನಿಕ ವಾಧ್ಯಮ ಪ್ರಪಂಚ ಮಕ್ಕಳ ಮನಸ್ಸು ಮತ್ತು ಏಕಾಗ್ರತೆಗೆ ಭಂಗ ತರುವಂತಿದೆ. ಪಾಲಕರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಶಂಕರನಾರಾಯಣ ತಾಲೂಕು ರಚನಾ ಸಮಿತಿ ಸಂಚಾಲ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದರು. ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನದ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪಾಲಕರ ಸಂದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಪಾಲಕರ ಸಭೆ ಮತ್ತು ವಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ,ಶಿಸ್ತು, ಶಿಕ್ಷಣ, ಉತ್ತಮ ನಡತೆಯಿಂದ ವಿದ್ಯಾರ್ಥಿ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಗೊಳ್ಳಲು ಸಾಧ್ಯವೆಂದು ಹೇಳಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಕಾಲೇಜಿನ ವಿಶೇಷತೆಗಳನ್ನು ಪ್ರಸ್ತುತ ಪಡಿಸಿದರು. ಡಾ.ವಸಂತ.ಜಿ.ಸ್ವಾಗತಿಸಿದರು. ಪ್ರಜ್ಞಾ ಪ್ರಾರ್ಥಿಸಿದರು. ಡಾ.ಗಿರೀಶ್ ಶಾನುಭೋಗ್ ಪ್ರಾಸ್ತಾವಿಸಿದರು. ಡಾ.ಗಂಗಾಧರ ಆರ್.ಎಚ್.ನಿರೂಪಿಸಿದರು.