ಜಿಲ್ಲೆ

ಪಾರಾಯಣ ಪಂಚಾಂಗ ಶ್ರವಣ

Dharwada - Basavaraj Idli

ಹುಬ್ಬಳ್ಳಿ: ಯುಗಾದಿ ಹಬ್ಬದ ಪ್ರಯುಕ್ತ ವಿಶ್ವಮಧ್ವ ಮಹಾ ಪರಿಷತ್ ನವನಗರ ಘಟಕದ ವತಿಯಿಂದ ಮಾ. 30ರಂದು ಸಂಜೆ 6ಕ್ಕೆ ಅಣುಭಾಷ್ಯ, ವಿಷ್ಣು ಸಹಸ್ರನಾಮ, ಸುಂದರಕಾಂಡ ರಾಮಾಯಣ, ಹರಿವಾಯುಸ್ತುತಿ, ಶ್ರೀ ಜಯತೀರ್ಥ ಸ್ತುತಿ, ಶ್ರೀ ರಘೂತ್ತಮ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರಗಳ ಪಾರಾಯಣ ನಂತರ ಪಂಚಾಂಗ ಶ್ರವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಕಾಂತ ಪುರೋಹಿತ, ಎಲ್.ಐ.ಜಿ. 154, ಒಂಭತ್ತನೇ ಕ್ರಾಸ್ ನವನಗರ, ಇಲ್ಲಿ ಪಾರಾಯಣ ನಡೆಯಲಿದ್ದು, ಭಕ್ತರು ಪಾಲ್ಗೊಳ್ಳಬೇಕೆಂದು ಘಟಕದ ಸಂಚಾಲಕ ಪಂ. ರಮೇಶಾಚಾರ್ಯ ಹಿಪ್ಪರಗಿ ವಿನಂತಿಸಿದ್ದಾರೆ.