ಜಿಲ್ಲೆ

ಹಾಲು ಖರೀದಿಗೆ ಮನವಿ

Chitradurga

ಪರಶುರಾಮಪುರ: ಜಾಜೂರು ಸುತ್ತಮುತ್ತ ಗ್ರಾಮಗಳಲ್ಲಿ ಹೈನುಗಾರಿಕೆ ನಡೆಸುತ್ತಿರುವ ರೈತರಿಂದ ಸರ್ಕಾರವೇ ಹಾಲು ಖರೀದಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಜಾಜೂರು, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಕಾಮಸಮುದ್ರ ಸೇರಿ ವಿವಿಧ ಹಳ್ಳಿಗಳ ರೈತರು ದಿನನಿತ್ಯ ನೂರಾರು ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಆಂಧ್ರಪ್ರದೇಶದ ಕಲ್ಯಾಣದುರ್ಗದಲ್ಲಿನ ಹಾಲಿನ ಡೇರಿ ಬಂದ್ ಆಗಿದ್ದು, ರೈತರಿಗೆ ಸಮಸ್ಯೆಯಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಹೈನುಗಾರರಾದ ಬೊಮ್ಮನಕುಂಟೆ ತಿಪ್ಪೇಸ್ವಾಮಿ, ಜಾಜೂರು ಕೆ.ಜೆ.ಸಂತೋಷ, ಮಂಜುನಾಥ, ಗಿರೀಶ, ಪ್ರಶಾಂತ, ಅನಂತಕುಮಾರ, ನೀಲಕಂಠಪ್ಪ, ಜನಾರ್ದನ, ವಸಂತಕುಮಾರ ಆಗ್ರಹಿಸಿದ್ದಾರೆ.