ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆ

Chitradurga

ಪರಶುರಾಮಪುರ: ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಗಳಾಗಿವೆ ಎಂದು ಚಳ್ಳಕೆರೆ ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು.

ಗ್ರಾಮದ ಸರ್ ಸಿ.ವಿ. ರಾಮನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳು-ಪಾಲಕರ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ವರ್ಷದುದ್ದಕ್ಕೂ ಪಠ್ಯ-ಪಠ್ಯೇತರ ಚಟುವಟಿಕೆ ಕೈಗೊಳ್ಳುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿ ಬಿ. ರಾಜಕುಮಾರ್, ಪ್ರತಿ ಶಾಲೆಯಲ್ಲೂ ದೇಶಿ ಸಂಸ್ಕೃತಿ ಬಿಂಬಿಸುವ ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದೆ ಎಂದರು.

ಚಿತ್ರದುರ್ಗದ ಎಸ್‌ಎಲ್‌ವಿ ಕಾಲೇಜು ಪ್ರಾಚಾರ್ಯ ಕೊಟ್ರೇಶ್, ಉಪನ್ಯಾಸಕಿ ಎಸ್.ಆರ್. ನಯನಾ ಮೂರ್ತಿ ಮಾತನಾಡಿದರು.

ಮುಖ್ಯಶಿಕ್ಷಕ ಹನುಮಂತರಾಯ, ಸಾಹಿತಿ ಹರೀಶಬಾಬು, ರೇಖಾ, ಗುರುಸ್ವಾಮಿ, ಲೋಕೇಶ, ಪೂಜಾ, ಗ್ರಾಪಂ ಉಪಾಧ್ಯಕ್ಷೆ ಎನ್ ದೀಪಾ, ಸದಸ್ಯರಾದ ಬೊಮ್ಮಕ್ಕ, ಪ್ರಸನ್ನಕುಮಾರ, ಶ್ರೀದೇವಿ, ಯು. ಕೇಶವಮೂರ್ತಿ, ಶಿಕ್ಷಕರಾದ ಸುಬ್ರಮಣ್ಯ, ಜೆ ತಿಮ್ಮಯ್ಯ ಇತರರಿದ್ದರು.

ವಿದ್ಯಾರ್ಥಿಗಳಿಂದ ನಾಟಕ, ಸಮೂಹ ನೃತ್ಯ, ಏಕಪಾತ್ರಾಭಿನಯ, ಜಾನಪದ ನೃತ್ಯ, ಕೋಲಾಟ ನಡೆದವು.