ಜಿಲ್ಲೆ

ಚೌಳೂರು ಬ್ಯಾರೇಜ್‌ಗೆ ಬಾಗಿನ ಅರ್ಪಣೆ

Chitradurga

ಪರಶುರಾಮಪುರ: ಜನಪ್ರತಿನಿಧಿಗಳು ಕ್ಷೇತ್ರದ ಕುಂದು-ಕೊರತೆ ಅರಿತು ಜನರಿಗೆ ಸ್ಪಂದಿಸಬೇಕು ಎಂದು ಶ್ರೀ ಶಿವಮೂರ್ತಿ ಮರುಘಾ ಶರಣರು ಕಿವಿಮಾತು ಹೇಳಿದರು.

ಚೌಳೂರು ಹೊರವಲಯದ ಬ್ಯಾರೇಜ್ ಕಮ್ ಬ್ರಿಡ್ಜ್‌ಗೆ ಬಾಗಿನ ಅರ್ಪಿಸಿ ಮಾತನಾಡಿ, ರೈತರಿಗೆ ನೀರು ಕೊಟ್ಟರೆ ಬೇರೆನನ್ನೂ ಕೇಳುವುದಿಲ್ಲ ಎಂದರು.

ದೊಡ್ಡೇರಿಯ ಶ್ರೀ ಕನ್ನೇಶ್ವರ ಮಠದ ಮಲ್ಲಪ್ಪ ಸ್ವಾಮೀಜಿ ಮಾತನಾಡಿ, ವೇದಾವತಿ ನದಿಗೆ ನೀರು ಹರಿಸುವಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ ಅವರ ಶ್ರಮ ಶ್ಲಾಘನೀಯ ಎಂದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ರೈತರು, ಮಠಾಧೀಶರ ಹೋರಾಟ, ಹಿಂದಿನ ಶಾಸಕರ ಪ್ರಯತ್ನ ಸೇರಿ ಎಲ್ಲರ ಹೋರಾಟದಿಂದ ನೀರು ಹರಿದಿದೆ. ಕ್ಷೇತ್ರಕ್ಕೆ ನೀರು ಹರಿದಿರುವುದು ಮೇಲ್ನೋಟಕ್ಕೆ ನನ್ನ ಶ್ರಮದಂತೆ ಕಂಡರೂ, ಈ ಯಶಸ್ಸು ಕ್ಷೇತ್ರದ ಜನರದ್ದು ಎಂದರು.

ಚೌಳೂರು ಮಂಡಲ್ ಮಾಜಿ ಅಧ್ಯಕ್ಷ ಲಿಂಗಣ್ಣ ಮಾತನಾಡಿ, ಬಯಲು ಸೀಮೆ ಜನರಿಗೆ ಸರ್ಕಾರ ನೀರೊದಗಿಸಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ತಾಪಂ ಸದಸ್ಯ ಸಮರ್ಥರಾಯ, ಜಿಪಂ ಸದಸ್ಯ ಬಿ.ಪಿ.ಪ್ರಕಾಶ ಮೂರ್ತಿ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷ ಜಿ.ವೀರೇಶ, ಮುಖಂಡ ಎಸ್.ಚನ್ನಕೇಶವ ಇತರರಿದ್ದರು.