ಪರಶುರಾಮಪುರ: ದೇಶದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಸಾಮರಸ್ಯದ ಅಡಿಪಾಯ ಆಗಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ಸಮೀಪದ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಪಾಲ್ಗೊಂಡ ಮಾತನಾಡಿ, ಹಳ್ಳಿಗರು ಇಂದಿಗೂ ವೈಯಕ್ತಿಕ ಸಮಸ್ಯೆಗಳಿದ್ದರೂ ಗುಡಿಕಟ್ಟೆ ಸಂಪ್ರದಾಯವನ್ನು ಮುರಿಯದೇ ಪ್ರೀತಿ-ವಿಶ್ವಾಸದಿಂದ ಜೀವನ ನಡೆಸುತ್ತಿರುವುದು ಮಾದರಿ ಎಂದರು.
ನಿವೃತ್ತ ಬೆಸ್ಕಾಂ ಅಧಿಕಾರಿ ಪಿ.ರುದ್ರಮೂರ್ತಿ, ಮುಖಂಡ ಪಾತಲಿಂಗಪ್ಪ, ಕೆ.ಶಿವಮೂರ್ತಿ, ಕೆ.ಲಿಂಗಣ್ಣ, ಎ.ವಿ.ನಿರಂಜನಮೂರ್ತಿ, ಕೆ.ಟಿ.ರಾಜಶೇಖರ್, ಎ.ವಿ.ಸೋಮಸುಂದ, ಜಾತ್ರಾ ಉತ್ಸವ ಸಮಿತಿಯ ಕರೀಕೆರೆ ನಾಗರಾಜು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‌ಶಂಕರ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ, ಗುಜ್ಜಾರಪ್ಪ, ನಾಗರಾಜು, ವೇದಮೂರ್ತಿ, ಮಂಜಣ್ಣ ಇದ್ದರು.