ಜಿಲ್ಲೆ

ಸರಳ ವಾಸವಿ ಜಯಂತಿ ಆಚರಣೆ

Chitradurga

ಪರಶುರಾಮಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಆರ್ಯವೈಶ್ಯ ಸಮುದಾಯದವರು ಶನಿವಾರ ಮನೆಯಲ್ಲಿಯೇ ಶ್ರೀವಾಸವಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಿದರು.

ವಾಸವಿ ದೇವಿಯ ಭಾವಚಿತ್ರಕ್ಕೆ ಹೂವು, ಒಡವೆ, ವಸ್ತ್ರಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಆರ್ಯವೈಶ್ಯ ಸಮುದಾಯದ ಮುಖಂಡ ಸೂರಪ್ಪಶೆಟ್ಟಿ, ಶ್ಯಾಮಸುಂದರ, ನಾಗರಾಜು, ರಾಜು, ಸಂದೀಪ, ಕಿರಣ್, ಎಸ್. ರಾಜು, ಶಂಕರಣ್ಣ ಇದ್ದರು.