ಜಿಲ್ಲೆ

ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ ವಾಗ್ದಾನ

Chitradurga

ಪರಶುರಾಮಪುರ: ಹೋಬಳಿಯ ವಿವಿಧೆಡೆ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ ಆಚರಿಸಲಾಯಿತು.

ಗ್ರಾಪಂ ಅಧ್ಯಕ್ಷ ಎಂ.ಆರ್. ರುದ್ರೇಶ ಮಾತನಾಡಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳ ಗ್ರಂಥಾಲಯ ಮತ್ತು ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಜೀವನ ಚರಿತ್ರೆ ಪುಸ್ತಕ ನೀಡುವುದಾಗಿ ಭರವಸೆ ನೀಡಿದರು. ವಕೀಲ ಪಿ.ಒ. ಪ್ರಕಾಶ್ ಉಪನ್ಯಾಸ ನೀಡಿದರು. ಗ್ರಾಮದ ಶಿವರಾಜು ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ನಾಡಕಚೇರಿ: ಕಂದಾಯ ಇಲಾಖೆ, ಬಾಬು ಜಗಜೀವನರಾಂ ಯುವಕ ಸಂಘ ಹಾಗೂ ಅಟಲ್‌ಜೀ ಕೇಂದ್ರದಿಂದ ನಾಡಕಚೇರಿಯಲ್ಲಿ ಅಂಬೇಡ್ಕರ್, ಬಾಬೂಜಿ ಜಯಂತಿ ಆಚರಿಸಲಾಯಿತು.

ಬಾಬು ಜಗಜೀವನ್‌ರಾಂ ಯುವಕ ಸಂಘದ ಅಧ್ಯಕ್ಷ ಜಯನಾಗ್, ಉಪ ತಹಸೀಲ್ದಾರ್ ಕೆ.ಬಿ. ವಸಂತಕುಮಾರ, ಆರ್‌ಐ ಹಿರಿಯಪ್ಪ, ಹನುಮಂತಪ್ಪ, ಶಿವರಾಜು, ಸಿಬ್ಬಂದಿ ಗೋವಿಂದಪ್ಪ, ಬಾಬು ಜಗಜೀವನ ರಾಂ ಸಂಘದ ಪದಾಧಿಕಾರಿಗಳಿದ್ದರು.