ಜಿಲ್ಲೆ

ಬಾರ್‌ಗಳಿಗೆ ಅಧಿಕಾರಿಗಳ ಭೇಟಿ

Chitradurga

ಪರಶುರಾಮಪುರ: ಸರ್ಕಾರದ ಸೂಚನೆಯನ್ವಯ ತಾಲೂಕಿನ ವಿವಿಧ ಬಾರ್, ವೈನ್ ಶಾಪ್‌ಗಳಿಗೆ ಭೇಟಿ ನೀಡಿ ಪ್ರತಿ ಅಂಗಡಿಯ ಸನ್ನದು ತಪಾಸಣೆ ಕೈಗೊಂಡು ವರದಿ ಸಲ್ಲಿಸಲಾಗುತ್ತದೆ ಎಂದು ಚಳ್ಳಕೆರೆ ತಾಲೂಕು ಅಬಕಾರಿ ನಿರೀಕ್ಷಕ ನಾಗರಾಜು ತಿಳಿಸಿದರು.

ಗ್ರಾಮದ ಬಾರ್‌ವೊಂದಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, ತಾಲೂಕಿನಾದ್ಯಂತ ಶನಿವಾರ 25ಕ್ಕೂ ಹೆಚ್ಚು ಬಾರ್ ಆರಂಭಗೊಂಡಿವೆ. ಈ ಎಲ್ಲ ಬಾರ್‌ಗಳಲ್ಲಿ ಸಂಗ್ರಹಿಸಲ್ಪಟ್ಟ ಮದ್ಯದ ವಿವರವನ್ನು ಸರ್ಕಾರಕ್ಕೆ ನೀಡಬೇಕಿದೆ ಈ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗುತ್ತದೆ ಎಂದರು.

ಅಬಕಾರಿ ಅಧಿಕಾರಿ ನಾಗರಾಜು, ವೆಂಕಟೇಶ, ಕೃಷ್ಣಸ್ವಾಮಿ, ಬೊಮ್ಮಣ್ಣ, ಶೈಲಾ ಮತ್ತಿತರರು ಇದ್ದರು.