ಜಿಲ್ಲೆ

ಪರಿಸರ ಜಾಗೃತಿ ಅವಶ್ಯ

Chitradurga

ಪರಶುರಾಮಪುರ: ಪರಿಸರ ಸಂರಕ್ಷಣೆ ಮಾಡುವಲ್ಲಿ ವಿಫಲತೆಯಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ ಎಂದು ವೈದ್ಯಾಧಿಕಾರಿ ಡಾ.ರಮೇಶ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆಗೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಹಣಕಾಸಿನ ನೆರವು ನೀಡಿದರೂ ಕೂಡ ಜನ ಜಾಗೃತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಚನ್ನಕೇಶವಪ್ಪ, ಲ್ಯಾಬ್‌ಟೆಕ್ನೀಷಿಯನ್ ವೀರೇಂದ್ರ, ಸ್ಟಾಫ್ ನರ್ಸ್ ಮಂಜುಳಾ, ಸಿಬ್ಬಂದಿ ಲೇಪಾಕ್ಷಿ, ಮಂಜುನಾಥ, ಲಕ್ಷ್ಮೀದೇವಿ, ಸರೋಜಾ, ಅನಿತಾ ಇದ್ದರು.