ಜಿಲ್ಲೆ

ವಿಶ್ವವೇ ಕೊಂಡಾಡಿದ ಮಹಾನ್ ಚೇತನ

ಪರಶುರಾಮಪುರ: ಸ್ವಾಮಿ ವಿವೇಕಾನಂದರು, ಇಡೀ ವಿಶ್ವಕ್ಕೆ ಭಾರತೀಯ ಪರಂಪರೆ, ಸಂಸ್ಕೃತಿ ಪರಿಚಯಿಸಿದ ಮಹಾನ್ ದೇಶಭಕ್ತ ಎಂದು ಪ್ರಾಚಾರ್ಯ ಡಾ.ಕೆ.ಟಿ.ಮಹಾಂತೇಶ ತಿಳಿಸಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಮಾತನಾಡಿ, ಯುವಕರು ಸಾಧಕರು, ಸಂತರ ಪುಸ್ತಕಗಳನ್ನು ಓದಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಿವೃತ್ತ ಪ್ರಾಚಾರ್ಯ ದೇವೀರಪ್ಪ ಮಾತನಾಡಿ, ಯುವ ಶಕ್ತಿ ಸಂಘಟಿತರಾಗಿ ದಾರ್ಶನಿಕರ ಹಾದಿಯಲ್ಲಿ ನಡೆದು ನಮ್ಮ ದೇಶದ ಪರಂಪರೆ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಹಾಗೂ ರಾಂಜರ್ಸ್‌ ಆ್ಯಂಡ್ ರೋವರ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ವಾಣಿಜ್ಯಶಾಸ್ತ್ರ ವಿಭಾಗದ ವೀರಭದ್ರಪ್ಪ, ಲೆಫ್ಟಿನೆಂಟ್ ರವಿಕುಮಾರ, ಪ್ರಾಧ್ಯಾಪಕರಾದ ಶ್ರೀನಿವಾಸ, ರಂಗನಾಥ, ಹಲಸಂದಿ ಸತೀಶ, ರಾಕೇಶ್, ಸುನಿಲ್ ಮಾಣಕವಾಡ ಇತರರಿದ್ದರು.