ಜಿಲ್ಲೆ

ಟೊಮ್ಯಾಟೊ ಬೀದಿಗೆ ಚೆಲ್ಲಿದ ರೈತರು

ಪರಶುರಾಮಪುರ: ದರ ಕುಸಿತದಿಂದ ಕಂಗಾಲಾದ ಹೋಬಳಿಯ ರೈತರು ಸೋಮವಾರ ಸಂತೆಯಲ್ಲಿ ಟೊಮ್ಯಾಟೊ ಹಣ್ಣನ್ನು ಬೀದಿಗೆ ಸುರಿದು ಪ್ರತಿಭಟನೆ ನಡೆಸಿದರು.

ಆಂಧ್ರ-ಕರ್ನಾಟಕದ ವಿವಿಧ ಹಳ್ಳಿಗಳಿಂದ ಸಂತೆಗೆ ಮಾರಾಟಕ್ಕೆ ತಂದಿದ್ದ ಟೊಮ್ಯಾಟೊ ಮತ್ತು ಹಾಗಲಕಾಯಿ ದರ 12 ಕೆ.ಜಿ. ಬಾಕ್ಸ್‌ಗೆ ಕೇವಲ 10-15 ರೂ. ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಆರೇಳು ತಿಂಗಳು ಕಷ್ಟಪಟ್ಟು ದುಡಿದ ಬೆಳೆಗೆ ಕನಿಷ್ಠ ಬೀಜ ಗೊಬ್ಬರದ ಖರ್ಚು ಬರದಿದ್ದರೆ ಜೀವನ ನಡೆಸುವುದಾದರು ಹೇಗೆ ಎಂದು ಅಳಲು ತೋಡಿಕೊಂಡರು.

ಸರ್ಕಾರಿ ಕೂಡಲೇ ತರಕಾರಿ ದರದ ಸ್ಥಿರತೆ ಕಾಪಾಡಬೇಕು. ರೈತರ ಹಿತ ಕಾಯಲು ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯ ಪಿ.ಪ್ರಸನ್ನಕುಮಾರ, ರೈತ ಮುಖಂಡರಾದ ಪಿಲ್ಲಂಪಲ್ಲಿ ರಾಮಣ್ಣ, ಚೌಳೂರು ವೀರಭದ್ರಪ್ಪ, ತಿಪ್ಪೇಸ್ವಾಮಿ, ವೀರೇಶ, ದ್ಯಾಮಣ್ಣ, ಆಂಜನೇಯ, ದರ್ಶನ, ತಿಪ್ಪೇಸ್ವಾಮಿ ಮತ್ತಿತರರಿದ್ದರು.