ಜಿಲ್ಲೆ

ಪರಶುರಾಮಪುರದಲ್ಲೂ ಮಳೆ

Chitradurga

ಪರಶುರಾಮಪುರ: ಸಮೀಪದ ಕಲಮರಹಳ್ಳಿ, ಹುಲಿಕುಂಟೆ, ಬೋವಿಕಾಲನಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ-ಮಳೆಗೆ ಅಡಿಕೆ, ಪಪ್ಪಾಯಿ ಗಿಡಗಳು, ಗುಡಿಸಲು, ಕುರಿಶೆಡ್, ದನದ ಕೊಟ್ಟಿಗೆಗೆ ಹಾನಿಯಾಗಿದೆ.

ಕಲಮರಹಳ್ಳಿ, ಹುಲಿಕುಂಟೆ ಬೋವಿಕಾಲನಿ, ಜಾಲಿಗೊಲ್ಲರಹಟ್ಟಿ ವಿವಿಧೆಡೆ ಮನೆ, ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.

ಸ್ಥಳಕ್ಕೆ ಚಳ್ಳಕೆರೆ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕ ವಿರೂಪಾಕ್ಷಪ್ಪ, ತೋಟಗಾರಿಕಾ ಅಧಿಕಾರಿ ರಾಘವೇಂದ್ರ, ವಿಎ ಕಾಡೇಶ ಭೇಟಿ ನೀಡಿ ನಷ್ಟದ ಮಾಹಿತಿ ಸಂಗ್ರಹಿಸಿದರು.