ಜಿಲ್ಲೆ

ಕಾರ್ಮಿಕರಿಗಾಗಿ ಉಚಿತ ಭೋಜನ ಕೇಂದ್ರ

Chitradurga

ಪರಶುರಾಮಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಂಧ್ರಗಡಿ ಗ್ರಾಮದ ಕಟ್ಟಡ, ಅಸಂಘಟಿತ ಹಾಗೂ ಕೂಲಿ ಕಾರ್ಮಿಕರಿಗಾಗಿ ಸಂಸದ ಎ.ನಾರಾಯಣಸ್ವಾಮಿ ಅವರು ಉಚಿತ ಭೋಜನ ಕೇಂದ್ರ ಆರಂಭಿಸಿದ್ದಾರೆ ಎಂದು ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ ತಿಳಿಸಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಜನರಿಗೆ ತಿಂಡಿ ವಿತರಿಸುವ ಮೂಲಕ ಉಚಿತ ಭೋಜನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಸದರು ಚಳ್ಳಕೆರೆ ತಾಲೂಕು ಹಾಗೂ ಪರಶುರಾಮಪುರ ಹೋಬಳಿ ಕೇಂದ್ರಗಳಲ್ಲಿ ಕೂಲಿ ಕಾರ್ಮಿಕರಿಗೆ ಬೆಳಗಿನ ತಿಂಡಿ-ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮುಖಂಡರಾದ ಶಿವಪುತ್ರಪ್ಪ, ಜೆ.ಒ.ಚನ್ನಕೇಶವ, ಡಿವಿಕೆ ಸ್ವಾಮಿ, ಗ್ರಾಪಂ ಸದಸ್ಯರಾದ ಬಿ.ತಿಪ್ಪೇಸ್ವಾಮಿ, ಎಸ್.ತಿಪ್ಪೇಸ್ವಾಮಿ, ಸಿದ್ದೇಶಣ್ಣ ಇತರರಿದ್ದರು.