ಜಿಲ್ಲೆ

ಹಿಂಜರಿಕೆ ಬಿಟ್ಟು, ಮುನ್ನಡೆ ಸಾಧಿಸಿ

Chitradurga

ಪರಶುರಾಮಪುರ: ಅಂಗವಿಕಲರು ಮನೋಸ್ಥೈರ್ಯ ಕುಗ್ಗಿಸಿಕೊಳ್ಳದೆ ಸೌಕರ್ಯ ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೋಮವಾರ ಪರಶುರಾಮಪುರ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ಆಹಾರದ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಪಾಲಕರ ಅನಾರೋಗ್ಯ, ಅನುವಂಶೀಯತೆ, ಪರಿಸರದ ಪ್ರಭಾವದಿಂದ ಕೆಲವರು ದೈಹಿಕ-ಮಾನಸಿಕವಾಗಿ ಅಂಗವಿಕಲರಾಗಿ ಜನಿಸುತ್ತಾರೆ. ಇದರಿಂದ ಚಿಂತೆಗೀಡಾಗದೆ ಧೈರ್ಯದಿಂದ ಅವಕಾಶ ಬಳಸಿಕೊಂಡು ಮುನ್ನುಗ್ಗಬೇಕು ಎಂದರು.

ಅಂಗವಿಕಲರಿಗೆ ಒಂದು ಅಂಗ ಊನವಾದರೆ ಮತ್ತೊಂದು ಅಂಗ ತೀವ್ರ ಸ್ವರೂಪದ ಶಕ್ತಿ ಹೊಂದಿರುತ್ತದೆ. ಊನತೆ ಬಗ್ಗೆ ಚಿಂತಿಸದೆ ಮಾನಸಿಕವಾಗಿ ಧೈರ್ಯದಿಂದಿದ್ದು ಸಂಗೀತ, ಸಾಹಿತ್ಯ, ಕಲೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮದ ನೂರಕ್ಕೂ ಅಧಿಕ ಅಂಗವಿಕಲರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು. ಪರಶುರಾಮಪುರ ಹೋಬಳಿಯ ಟಿ.ಎನ್.ಕೋಟೆ, ದೊಡ್ಡಚೆಲ್ಲೂರು, ಪಿ.ಮಹದೇವಪುರ, ಸಿದ್ದೇಶ್ವರನದುರ್ಗ, ಪರಶುರಾಮಪುರ ಗ್ರಾಪಂ ಕೇಂದ್ರದಲ್ಲಿ ಆಯಾ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ತಾಪಂ ಅಧ್ಯಕ್ಷೆ ವಿಜಯಲಕ್ಷಿ ್ಮ, ಸದಸ್ಯರಾದ ಸಮರ್ಥರಾಯ, ಕರಡಪ್ಪ, ಗ್ರಾಪಂ ಅಧ್ಯಕ್ಷರಾದ ಒ.ಬೈಲಪ್ಪ, ಎಲ್ ಸುರೇಶ, ಸರೋಜಾ, ಲಲಿತಮ್ಮ, ಎಂ.ಆರ್.ರುದ್ರೇಶ್, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಗ್ರಾಪಂ ಸದಸ್ಯರಾದ ಬೊಮ್ಮಕ್ಕ, ಪ್ರಸನ್ನಕುಮಾರ, ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ, ಗುಜ್ಜಾರಪ್ಪ, ಜಯವೀರಾಚಾರಿ, ಪ್ರಕಾಶಗೌಡ, ಆರ್‌ಐ ಹಿರಿಯಪ್ಪ, ವಿಎ ಶಿವಕುಮಾರ, ದುರುಗಮ್ಮ, ಪಿಡಿಒ ದೇವರಾಜು ಇತರರಿದ್ದರು.