ಜಿಲ್ಲೆ

ಆರೋಗ್ಯ ಜಾಗೃತಿ ಅವಶ್ಯ

ಪರಶುರಾಮಪುರ: ಕರೊನಾ, ಎಚ್1ಎನ್1, ಹಕ್ಕಿಜ್ವರದಂತಹ ಮಾರಕ ರೋಗಗಳ ಕುರಿತು ನಾಗರಿಕರು ಜಾಗೃತಿ ವಹಿಸಬೇಕು ಎಂದು ಟಿಎಚ್‌ಒ ಡಾ.ಪ್ರೇಮಸುಧಾ ಹೇಳಿದರು.

ಸಮೀಪದ ಟಿ.ಎನ್.ಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದೊಳಗೆ ಹೊಸಬರು ಪ್ರವೇಶಿಸುವ ವೇಳೆ ಗಮನಿಸಿ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು ಎಂದರು.

ಜಂಕ್‌ಫುಡ್, ಧೂಮಪಾನ, ಅವ್ಯವಸ್ಥಿತ ಜೀವನ ಶೈಲಿ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ ಮಾತನಾಡಿ, ಸರ್ಕಾರದ ನಿರ್ದೇಶನದನ್ವಯ ಸ್ಥಳೀಯ ಆಡಳಿತ ಚಾಚೂ ತಪ್ಪದೇ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೈರ್ಮಲ್ಯತೆಗೆ ಒತ್ತು ನೀಡಲಾಗುವುದು ಎಂದರು.

ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಸದಸ್ಯರಾದ ಆರ್.ಟಿ.ನಿಂಗಣ್ಣ, ಗೀತಾವಾಣಿ, ಡಾ.ಹಿಮಬಿಂಧು, ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ, ರಂಗಮ್ಮ, ರಾಧಾ, ಭಾಗ್ಯಾ, ಅಶ್ವಿನಿ, ಸುಮಾ, ಹನುಮಕ್ಕ, ಆಶಾ ಕಾರ್ಯಕರ್ತೆ ಕವಿತಾ, ಶಿಕ್ಷಕರಾದ ಜಯಮ್ಮ, ಕಾಂತಾಮಣಿ, ಪಿ.ಗೋವಿಂದರಾಜು ಇದ್ದರು.