ಜಿಲ್ಲೆ

ಪ್ರತಿ ಕುಟುಂಬದಿಂದ ರಕ್ತದ ಮಾದರಿ ಸಂಗ್ರಹ

Chitradurga

ಪರಶುರಾಮಪುರ: ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಪೈಲಟ್‌ಯೋಜನೆಯಡಿ ಪರಶುರಾಮಪುರ ಹೋಬಳಿ ಕೇಂದ್ರ ಒಂದರಲ್ಲೇ 40 ಕುಟುಂಬ ಸದಸ್ಯರ ರಕ್ತದ ಮಾದರಿ ಸಂಗ್ರಹಿಸಿ ಕೇಂದ್ರ ಆರೋಗ್ಯ ಇಲಾಖೆಗೆ ಕಳಿಸಲಾಗಿದೆ ಎಂದು ಐಸಿಎಂಆರ್ ತಂಡದ ಕೋವಿಡ್-19 ನೋಡಲ್ ಅಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು.

ಗ್ರಾಮದಲ್ಲಿ ಶನಿವಾರ ಮನೆ ಮನೆಗೆ ತೆರಳಿ ಸ್ಥಳೀಯ ಆಡಳಿತದ ನೇತೃತ್ವದಲ್ಲಿ ಕುಟುಂಬದ ಓರ್ವ ಸದಸ್ಯರ ರಕ್ತದ ಮಾದರಿ ಪಡೆಯುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಡಳಿತ ವೈದ್ಯಾಧಿಕಾರಿ ಡಾ. ರಮೇಶ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದ 40 ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ತಲಾ ಒಬ್ಬರಿಂದ ರಕ್ತದ ಮಾದರಿ ಪಡೆಯಲಾಯಿತು ಎಂದರು.

ಗ್ರಾಪಂ ಅಧ್ಯಕ್ಷ ಎಂ.ಆರ್. ರುದ್ರೇಶ, ಪಿಎಸ್‌ಐ ಮಹೇಶ ಹೊಸಪೇಟೆ, ವೈದ್ಯಾಧಿಕಾರಿ ಡಾ. ರಮೇಶ, ಆಶಾ ಕಾರ್ಯಕರ್ತರ ಮಾರ್ಗದರ್ಶಿ ತರಬೇತುಗಾರ್ತಿ ಸಬೀಹಾಬೇಗಂ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಇದ್ದರು.