ಪರಶುರಾಮಪುರ: ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನ, ಸಂತೇಮೇಳ ಉಪಯುಕ್ತವಾದುದು ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಸಮೀಪದ ಪಿ.ಗೌರೀಪುರದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಹಬ್ಬ, ವಿಜ್ಞಾನ ಉಪಕರಣಗಳ ಪ್ರದರ್ಶನ ಹಾಗೂ ಸಂತೆಮೇಳದಲ್ಲಿ ಮಾತನಾಡಿದರು.
ಶಾಲಾ ಸಮಿತಿ ಅಧ್ಯಕ್ಷೆ ಎಚ್.ಮಂಗಳಗೌರಿ ಮಾತನಾಡಿ, ಪ್ರಾಥಮಿಕ ಶಾಲಾ ಮಕ್ಕಳಿಗೆ ಆಯೋಜಿಸಿರುವ ಈ ವಿಜ್ಞಾನ ಮೇಳವು ಅತ್ಯುಪಯುಕ್ತವಾದುದು. ಚಿಕ್ಕಂದಿನಲ್ಲಿ ಮಕ್ಕಳಿಗೆ ಇಂತಹ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡರೆ ಅವರಲ್ಲಿ ಸೃಜನಶೀಲತೆ ಬೆಳೆಯಲು ಸಾಧ್ಯ ಎಂದರು.
ಬಡ್ತಿ ಮುಖ್ಯಶಿಕ್ಷಕ ಟಿ.ಎಲ್.ಪ್ರಸನ್ನ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೀಲಕಂಠಪ್ಪ, ಮಹಾಲಿಂಗಪ್ಪ, ಬಿಆರ್‌ಪಿ ಪ್ರಸನ್ನಮಂಡೇಲಾ, ಮುಖ್ಯ ಶಿಕ್ಷಕರಾದ ಷಾಹಿನಾಜಾನ್, ಎಸ್.ಡಿ.ರವಿ, ಶಿಕ್ಷಕರಾದ ಸತೀಶ, ಚಂದ್ರಕಲಾ, ಶೋಭಾ, ಬಸವರಾಜು ಇದ್ದರು.