ಪರಶುರಾಮಪುರ: ಬೆಳಗೆರೆ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ 2020-21ನೇ ಸಾಲಿನ ಬಜೆಟ್ ಮಂಡಿಸಲಾಯಿತು.
ಪಿಡಿಒ ಇ.ಗುಂಡಪ್ಪ ಮಾತನಾಡಿ, 24,8,410 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ್ದು, ಕುಡಿವ ನೀರು, ಶೌಚಗೃಹ, ಬಡವರಿಗೆ ಮನೆ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ ಮಾತನಾಡಿ, ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿವುದು ಸಂತಸ ತಂದಿದೆ. ಬಯಲು ಶೌಚಮುಕ್ತ ಪಂಚಾಯಿತಿ, ಗುಡಿಸಲುಮುಕ್ತ ಗ್ರಾಮಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಕೆ ಟಿ.ನಿಜಲಿಂಗಪ್ಪ, ಗೋಪಾಲಪ್ಪ, ಶಿವಣ್ಣ, ದ್ಯಾಮಣ್ಣ, ನಾಗಭೂಷಣ್ ರಾವ್, ಬಲರಾಮಣ್ಣ, ಎ.ಸುನಿತಾ, ಮಂಜುಳಾ, ಸಂಗಮ್ಮ, ಶಾರದಮ್ಮ ಇತರರಿದ್ದರು.