ಜಿಲ್ಲೆ

ಕಡೇಗುಡೆ ಗ್ರಾಮದ 15 ಮಂದಿ ಕ್ವಾರಂಟೈನ್‌ಗೆ

ಪರಶುರಾಮಪುರ: ಆಂಧ್ರದ ಹಳ್ಳಿಗಳಿಗೆ ಹೋಗಿದ್ದ ಬಂದ ಕಾರಣ ರಾಜ್ಯದ ಗಡಿ ಗ್ರಾಮ ಕಡೇಹುಡೆಯ 15 ಜನರನ್ನು ಸೋಮವಾರ ತಾಲೂಕು ಆಡಳಿತ ವಶಕ್ಕೆ ಪಡೆದು ಹೋಂ ಕ್ವಾರಂಟೈನ್‌ಲ್ಲಿ ಇರಿಸಿದೆ.

ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಆಂಧ್ರದ ಹಳ್ಳಿಗಳಿಗೆ ಹೋಗಿ ಬಂದ ಕಾರಣ ಗ್ರಾಮದ 15 ಮಂದಿಯನ್ನು ಚಳ್ಳಕೆರೆಗೆ ಕರೆದೊಯ್ದು ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು.

ಟಿಎಚ್‌ಒ ಡಾ.ಪ್ರೇಮಸುಧಾ ಮಾತನಾಡಿ, ಕರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಪದೇ ಪದೆ ಆಂಧ್ರಕ್ಕೆ ಹೋಗುವುದು, ಅಲ್ಲಿನವರನ್ನು ಕರೆದುಕೊಂಡು ಗ್ರಾಮಕ್ಕೆ ಬರುತ್ತಿರುವುದು ಬೇಸರ ತರಿಸಿದೆ ಎಂದರು.

ತಾಪಂ ಇಒ ಶ್ರೀಧರ ಬಾರಿಕೇರ, ಡಾ.ವಿಶ್ವನಾಥ, ಪಿಎಸ್‌ಐ ಮಹೇಶ ಹೊಸಪೇಟೆ, ಪ್ರಭಾರ ಆರ್.ಐ.ಹಿರಿಯಪ್ಪ, ವಿಎ ದುರುಗಮ್ಮ, ಆಶಾ ಕಾರ್ಯಕರ್ತೆ ರಾಧಾ, ಆರೋಗ್ಯ ಕಾರ್ಯಕರ್ತೆ ಜ್ಯೋತಿ, ಸೋಮಶೇಖರ, ಪಾಂಡುರಂಗಪ್ಪ, ಮಲ್ಲೇಶಯ್ಯ, ಮಲ್ಲಿಕಾರ್ಜುನ ಇದ್ದರು.