ಜಿಲ್ಲೆ

ಕರೊನಾ ಕಾಲವಿದು, ಜಾಗೃತಿ ಅಗತ್ಯ

Chitradurga

ಪರಶುರಾಮಪುರ: ಇದು ಕರೊನಾ ಕಾಲ. ಈ ಸಮಯದಲ್ಲಿ ಅವರವರ ಸಾಮರ್ಥ್ಯವನ್ನು ಓರೆಗೆ ಹಚ್ಚಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಗ್ರಾಮದ ಚಳ್ಳಕೆರೆ ರಸ್ತೆಯ ನಾಯಕ ವಿದ್ಯಾವರ್ಧಕ ಸಂಘದ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಪ್ರಕಾಶ್ ಸ್ಟೀಲ್ ಐರನ್ ಕಂಪನಿ ಇತ್ತೀಚೆಗೆ ಆಯೋಜಿಸಿದ್ದ 300ಕ್ಕೂ ಹೆಚ್ಚು ಆಶಾ, ಅಂಗನವಾಡಿ, ಆರೋಗ್ಯ, ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಮನುಷ್ಯ ದುರಾಸೆ ತೊರೆದು ಸರಳತೆ, ಪ್ರಾಮಾಣಿಕತೆಯತ್ತ ಸಾಗಬೇಕಾಗಿದೆ. ಈ ಪಾಠವನ್ನು ಕರೊನಾ ಕಲಿಸಿಕೊಟ್ಟಿದೆ. ಅದನ್ನು ಅರಿತು ಜೀವಿಸಬೇಕು ಎಂದು ತಿಳಿಸಿದರು.

ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಶಾಸಕ ಟಿ.ರಘುಮೂರ್ತಿ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಮಾತನಾಡಿದರು.

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯ ಸಮರ್ಥರಾಯ, ನಗರಸಭೆ ಸದಸ್ಯ ಪ್ರಕಾಶಗೌಡ, ಪುರಸಭೆ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಇಒ ಶ್ರೀಧರಬಾರ್‌ಕೇರ, ಟಿಎಚ್‌ಒ ಡಾ.ಪ್ರೇಮಸುಧಾ, ಪಿಡಿಒಗಳಾದ ಜಿ.ನಾಗರಾಜು, ಎನ್.ಆರ್.ತಿಪ್ಪೇಸ್ವಾಮಿ, ಕೆಂಚಲಿಂಗಪ್ಪ ಇತರರಿದ್ದರು.