ಗುಂಡ್ಲುಪೇಟೆ: ಪಟ್ಟಣ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ ಅವರಿಗೆ ಸರ್ಕಾರ ಡಿವೈಎಸ್‌ಪಿ ಆಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಪಟ್ಟಣದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪರಶಿವಮೂರ್ತಿ ಅವರನ್ನು ಹಾಸನದ ಸಿಇಎನ್ ವಿಭಾಗದ ಡಿವೈಎಸ್‌ಪಿ ಆಗಿ ನಿಯೋಜಿಸಿದೆ. ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜಿಸುವವರೆಗೆ ಚಾಮರಾಜನಗರ ಸಿಇಎನ್‌ನ ಇನ್‌ಸ್ಪೆಕ್ಟರ್ ಸಾಗರ್ ಅವರಿಗೆ ಪ್ರಭಾರ ನೀಡಲಾಗಿದೆ.