ಎಚ್.ಡಿ.ಕೋಟೆ: ಪಟ್ಟಣದ ಶಾಂತಿಪುರ (ಹೆಬ್ಬಳ್ಳ) ತಂಬಾಕು ಹರಾಜು ಮಾರುಕಟ್ಟೆ ಪ್ಲಾಟ್‌ಫಾರ್ಮ್ ನಂ.1ಕ್ಕೆ 2025- 2026ನೇ ಸಾಲಿನ ಕ್ರಾಫ್ಟ್ ಕಮಿಟಿಗೆ ಕೃಷ್ಣಾಪುರ ಗ್ರಾಮದ ಪರಶಿವಮೂರ್ತಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಒಂದು ವರ್ಷದ ಅವಧಿಗೆ ಆಯ್ಕೆಯಾಗುವ ರಸಗೊಬ್ಬರ ಸರಬರಾಜು ಸದಸ್ಯ ಸ್ಥಾನಕ್ಕೆ ಚುನಾವಣೆ ಮೂಲಕ ತಂಬಾಕು ರೈತರು ಆಯ್ಕೆ ಮಾಡುವ ಪ್ರಕ್ರಿಯೆ ಕಳೆದ ಏಳು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷ ಪರಶಿವಮೂರ್ತಿ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪರಶಿವಮೂರ್ತಿ ಅವರನ್ನು ರೈತ ಮುಖಂಡರಾದ ಎಚ್.ಸಿ. ಶಿವಣ್ಣ, ಎ.ಜೆ. ಕಾಳೇಗೌಡ, ಜಿ.ಕೃಷ್ಣ, ಹರಿದಾಸ್, ಮೊತ್ತ ಬಸವರಾಜಪ್ಪ ಅಭಿನಂದಿಸಿದರು. ಪ್ರಕಾಶ್ ಮಟಕೆರೆ, ಅಪ್ಪಾಜಿ ಮೊಳೆಯೂರು, ವಾಟಾಳ್ ನಾಗರಾಜು, ಲೋಕೇಶ್, ಸತೀಶ್, ಆರ್.ಎನ್. ಚಂದ್ರೇಗೌಡ, ಬಾಲರಾಜು, ಆರ್. ಉಪಕಾರಿ, ಗಿರೀಶ್‌ಕುಮಾರ್, ಎಂ.ಆರ್.ಶಿವಮಲ್ಲಪ್ಪ ಮೊತ್ತ, ಎಂ.ಎನ್. ರವಿ, ತಮ್ಮೇಗೌಡ, ಪೃಥ್ವಿ ಕುಮಾರ್, ಮಹಾದೇವೇಗೌಡ, ಜೈಶಂಕರ್, ರಾಜಶೇಖರ್, ರಾಜೇಗೌಡ ಇದ್ದರು.