ಜಿಲ್ಲೆ

ಇಂದು ಪಾಲೇನಹಳ್ಳಿ ಚಿತ್ರಲಿಂಗೇಶ್ವರ ಉತ್ಸವ

ಪರಶುರಾಮಪುರ: ಸಮೀಪದ ಪಾಲೇನಹಳ್ಳಿಯಲ್ಲಿ ಚಿತ್ರಲಿಂಗೇಶ್ವರ ಉತ್ಸವ ಮತ್ತು ಶಿವರಾತ್ರಿ ಅಂಗವಾಗಿ ಫೆ.20, 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

20ರ ಬೆಳಗ್ಗೆ ಪಾಲೇನಹಳ್ಳಿಯ ಚಿತ್ರಲಿಂಗೇಶ್ವರಸ್ವಾಮಿ ತೋಪಿಗೆ ಮಾರನೋರಗೊಲ್ಲರ ಬೆಡಗಿನ ಅಣ್ಣತಮ್ಮಂದಿರು ಹಾಲು ಮೀಸಲು ತರುವ ಶಾಸ್ತ್ರ, ಶ್ರೀಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಗಂಗಾಪೂಜೆ, ಮೀಸಲು ಹಾಲು ಅರ್ಪಣೆ ಕಾರ್ಯಕ್ರಮ ಜರುಗಲಿದೆ.

21ರ ಬೆಳಗ್ಗೆ ಹರಕೆ ಅರ್ಪಣೆ, ಶ್ರೀಸ್ವಾಮಿಯ ತೋಪಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ರಾತ್ರಿ ದೇವರಾಯಪಟ್ಟಣದ ಶ್ರೀಕೃಷ್ಣ ಕಲಾ ಸಂಘದಿಂದ ಪೌರಾಣಿಕ ಕುರುಕ್ಷೇತ್ರ ನಾಟಕ ಏರ್ಪಡಿಸಲಾಗಿದೆ.