ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಯಲ್ಲಿ ನಗರದ ಶಹರ ಪೊಲೀಸ್ ಠಾಣೆ ಆವರಣಲ್ಲಿ ಶನಿವಾರ ರೌಡಿಗಳ ಪರೇಡ್ ನಡೆಯಿತು.
30ಕ್ಕೂ ಹೆಚ್ಚು ಸಕ್ರಿಯ ರೌಡಿ ಶೀಟರ್ಗಳನ್ನು ಪೊಲೀಸ್ ಠಾಣೆ ಆವರಣಕ್ಕೆ ಕರೆಯಿಸಿದ ಪೊಲೀಸರು, ರೌಡಿಗಳಿಂದ ಸಮಗ್ರ ಮಾಹಿತಿ ಪಡೆದರು. ಅಲ್ಲದೇ ಶಾಂತಿ, ಸುವ್ಯವಸ್ಥೆ ಕದಡದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ದುಷ್ಕೃತ್ಯಗಳು ನಡೆದರೆ ಅದಕ್ಕೆ ನೀವೇ ಜವಾಬ್ದಾರಾರು ಎಂದು ಪೊಲೀಸ್ ಇನ್ಸ್ಪೆಕ್ಟರ್ ಮಹ್ಮದ್ ರಫೀಕ್ ತಹಸೀಲ್ದಾರ್ ಅವರು ಖಡಕ್ ಎಚ್ಚರಿಕೆ ನೀಡಿದರು.