ಯಳಂದೂರು: ಪಟ್ಟಣದ ಬಳೇಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ಏ.1ರಂದು ನಡೆಯಲಿರುವ ನಾಡಮೇಗಲಮ್ಮ ಹಾಗೂ ಮಾರಮ್ಮನವರ ಕೊಂಡೋತ್ಸವ ನಿಮಿತ್ತ ಶುಕ್ರವಾರ ಸೌದೆಯನ್ನು ಅದ್ಧೂರಿಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇಗುಲದ ಬಳಿಯಲ್ಲಿ ಪೂಜೆ ಸಲ್ಲಿಸಿ ಅಲಂಕೃತ ಎತ್ತಿನಗಾಡಿಗಳು, ಟ್ರಾೃಕ್ಟರ್, ಲಾರಿ, ಗೂಡ್ಸ್ ಆಟೋಗಳಲ್ಲಿ ಮಂಗಳವಾದ್ಯ ಸಮೇತ ಮೆರವಣಿಗೆಯ ಮೂಲಕ ಸೌದೆಗಳನ್ನು ಕೊಂಡೊಯ್ಯಲಾಯಿತು. ಇದೇ ಪ್ರಥಮ ಬಾರಿಗೆ ಇಲ್ಲಿ ಕೊಂಡೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಏ.1 ರಂದು ಸಂಜೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಕೊಂಡೋತ್ಸವ ನಡೆಯಲಿದೆ.