ನಾಪೋಕ್ಲು ಪಟ್ಟಣದಲ್ಲಿ ಸಿಆರ್‌ಪಿಎಫ್‌ನ ಕ್ಷಿಪ್ರ ಕಾರ್ಯಾಚರಣೆ ಪಡೆ ಯೋಧರು ಪಥಸಂಚಲನ ನಡೆಸಿದರು. 
ಜಿಲ್ಲೆ

ಸಿಆರ್‌ಪಿಎಫ್ ಯೋಧರಿಂದ ಪಥಸಂಚಲನ

ಅಭಿನಯ್ ಎಚ್.ಎಂ

ನಾಪೋಕ್ಲು: ಸಿಆರ್‌ಪಿಎಫ್‌ನ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಸಂತೆ ದಿನವಾದ ಸೋಮವಾರ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

ಇಲ್ಲಿನ ಪೊಲೀಸ್ ಮೈದಾನದಿಂದ ಆರಂಭವಾದ ಪಥಸಂಚಲನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿ ಹಳೇ ತಾಲೂಕು ಕಚೇರಿ ತಲುಪಿತು. ಈ ಸಂದರ್ಭ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಲಾಯಿತು. ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.