ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಡಾ. ಪಾಟೀಲ ಪುಟ್ಟಪ್ಪ ಮತ್ತು ಶಿವಪ್ಪ ಎಸ್. ಶೆಟ್ಟರ್ ಸ್ಮರಣಾರ್ಥ ಇತ್ತೀಚೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡಾ.ಜಿ.ಆರ್. ತಮಗೊಂಡ ಉದ್ಘಾಟಿಸಿ ಮಾತನಾಡಿ, ಹುಬ್ಬಳ್ಳಿ ಅಭಿವೃದ್ಧಿಗೆ ಪಾಟೀಲ ಪುಟ್ಟಪ್ಪ ಅವರ ಕೊಡುಗೆ ಅಪಾರ. ಏಕೀಕರಣ ಹೋರಾಟ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರ ಪ್ರತಿಮೆ ಸ್ಥಾಪನೆ ಅತ್ಯಗತ್ಯ ಎಂದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ದತ್ತಿ ದಾನಿಗಳ ಬಗ್ಗೆ ಮಾಹಿತಿ ನೀಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮುಖರಾದ ಜಯಶ್ರೀ ಬೇವೂರ, ಶಕುಂತಲಾ ಹೂಗಾರ, ಸಂಧ್ಯಾ ದೀಕ್ಷಿತ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಅಶೋಕ ಸನ್ನಿ, ವಿರೂಪಾಕ್ಷ ಕಟ್ಟಿಮನಿ, ಎಸ್.ಕೆ. ಆದಪ್ಪನವರ, ಶಿವಶಂಕರ ಹಿರೇಮಠ. ಪದ್ಮಜಾ ಉಮರ್ಜಿ, ಸುರೇಶ ಹೊರಕೇರಿ, ಎಂ.ಪಿ. ಕುಂಬಾರ, ಸೋಮಶೇಖರ ಇಟಗಿ, ಮೃತ್ಯುಂಜಯ ಮಟ್ಟಿ, ಜಿ.ಬಿ. ಜವಳಿ, ಈಶ್ವರ ಜವಳಿ ಇತರರು ಉಪಸ್ಥಿತರಿದ್ದರು.