ಜಿಲ್ಲೆ

ಪತ್ರಿಕಾ ವಿತರಕರಿಂದ ಮುದ್ರಣ ವಿಭಾಗ ವೀಕ್ಷಣೆ

ಮಂಜುನಾಥ ಅಂಗಡಿ

ಧಾರವಾಡ: ಬೆಳಗಾಗುತ್ತಲೆ ಓದುಗರ ಮನೆ ಬಾಗಿಲಿಗೆ ಕನ್ನಡದ ನಂ. 1ಪತ್ರಿಕೆ ವಿಜಯವಾಣಿ ತಲುಪಿಸುವ ವಿತರಕರು, ಏಜೆಂಟರು ಮುದ್ರಣ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಹೊಸ ಅನುಭವ ಪಡೆದರು.

ತಾಲೂಕಿನ ವರೂರಿನಲ್ಲಿರುವ ವಿಜಯವಾಣಿ ಮುದ್ರಣ ವಿಭಾಗಕ್ಕೆ ಧಾರವಾಡದ ಪತ್ರಿಕಾ ವಿತರಕರು, ಏಜೆಂಟರು ಶುಕ್ರವಾರ ಭೇಟಿ ನೀಡಿದ್ದರು. ಪ್ರಿಂಟಿ0ಗ್ ವಿಭಾಗದ ಹೊಸ ತಂತ್ರಜ್ಞಾನಗಳನ್ನು ಕಂಡು ಸಂತಸಪಟ್ಟರು.

ಕೆಲವರು ಕಳೆದ 2-3 ದಶಕದಿಂದ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇತ್ತೀಚೆಗೆ ವೃತ್ತಿ ಆರಂಭಿಸಿದ್ದಾರೆ. ಪತ್ರಿಕೆ ಬಂದ ನಂತರ ಮನೆಮನೆಗೆ ತಲುಪಿಸುವ ಇವರಿಗೆ ಪತ್ರಿಕೆ ಮುದ್ರಣವಾಗುವ ಮಾಹಿತಿ ತಿಳಿಯಲು ಉತ್ಸುಕರಾಗಿದ್ದರು. ವಿಜಯವಾಣಿ ವತಿಯಿಂದ ವರೂರಿನ ಮುದ್ರಣ ವಿಭಾಗಕ್ಕೆ ಭೇಟಿ ನೀಡುವ ಅವಕಾಶ ಪಡೆದು, ಮುದ್ರಣದ ಮಜಲುಗಳನ್ನು ವೀಕ್ಷಿಸಿದರು.

ಪತ್ರಿಕೆಯ ಸಂಪಾದಕೀಯ, ಜಾಹೀರಾತು, ಮುದ್ರಣ ವಿಭಾಗಗಳಲ್ಲಿ ನಡೆಯುವ ಕಾರ್ಯ, ವಿಜಯವಾಣಿ ಪತ್ರಿಕೆ ತಮ್ಮ ಕೈಗೆ ಹೇಗೆ ಬರುತ್ತದೆ ಎಂಬುದರ ಮಾಹಿತಿ ಪಡೆದುಕೊಂಡರು.

ಧಾರವಾಡ ವಿತರಕರಾದ ಶಶಿಕಾಂತ ನೀಲಾಕಾರಿ, ನಾಗರಾಜ ಕುಲಕರ್ಣಿ, ಬಸವರಾಜ ಗೊಂದಿ, ಜಿ.ಎ. ಬದಾಮಿ, ಇತರರಿದ್ದರು.