ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಗಣೇಶ ನಾಯಕ್ ಧ್ವಜಾರೋಹಣಗೈದರು 
ಜಿಲ್ಲೆ

ದೇಶ ಕಟ್ಟುವ ಕಾಯಕಕ್ಕೆ ಸಂಕಲ್ಪ

ಹೆಬ್ರಿ: ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರನ್ನು, ತಮ್ಮ ಸರ್ವಸ್ವ ದೇಶಕ್ಕೋಸ್ಕರ ಅರ್ಪಿಸಿರುವ ಸ್ವಾತಂತ್ರೃ ಹೋರಾಟಗಾರರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡು ಗೌರವ ಸಲ್ಲಿಸಬೇಕು. ದೇಶ ಕಟ್ಟುವ ಕಾಯಕವೇ ನಮ್ಮ ಧ್ಯೇಯವಾಗಿರಲಿ ಎಂದು ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಗಣೇಶ ನಾಯಕ್ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ರವಿರಾವ್, ಕಾರ್ಯದರ್ಶಿ ಗುರುದಾಸ ಶೆಣೈ, ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಅಧ್ಯಕ್ಷ ರಾಜೇಶ ನಾಯಕ್, ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್, ಸುಧೀರ್ ನಾಯಕ್, ಅಮೃತ ಭಾರತಿ ವಸತಿ ನಿಲಯ ಗೌರವ ಅಧ್ಯಕ್ಷ ಯೋಗೀಶ್ ಭಟ್, ಸದಸ್ಯ ರಾಮಕೃಷ್ಣ ಆಚಾರ್ಯ, ಕರ್ಣಾಟಕ ಬ್ಯಾಂಕ್ ಹೆಬ್ರಿ ಅಸಿಸ್ಟೆಂಟ್ ಮ್ಯಾನೇಜರ್ ಸುಮಂತ್, ಧಾಮಿನಿ, ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ, ಅರುಣ್ ಎಚ್.ವೈ, ಮುಖ್ಯ ಶಿಕ್ಷಕಿಯರಾದ ಅಪರ್ಣಾ ಆಚಾರ್, ಶಕುಂತಳಾ, ಅನಿತಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಉಪ ಮುಖ್ಯ ಶಿಕ್ಷಕ ಮಹೇಶ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.