ಹಗರಿಬೊಮ್ಮನಹಳ್ಳಿಯ ಭಾವಸಾರ ಕ್ಷತ್ರಿಯ ಸಮುದಾಯದಿಂದ 50ನೇ ವರ್ಷದ ಸುವರ್ಣ ದಿಂಡಿ ಮಹೋತ್ಸವ ಜರುಗಿತು. ತಾಲೂಕು ಅಧ್ಯಕ್ಷ ಪಟಗಿ ರಾಮಚಂದ್ರ ರಾವ್, ಉಪಾಧ್ಯಕ್ಷ ವಿರುಪಾಕ್ಷರಾವ್, ಕಾರ್ಯದರ್ಶಿ ಅರುಣ್‌ಕುಮಾರ್, ಗುರುಪ್ರಸಾದ್‌ರಾವ್, ಪಿ.ಅನುಮೇಶ, ವೆಂಕಟೇಶ ಇತರರಿದ್ದರು. 
ಜಿಲ್ಲೆ

ಪಾಂಡುರಂಗ ಮೂರ್ತಿಯ ಮೆರವಣಿಗೆ ಅದ್ದೂರಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಭಾವಸಾರ ಕ್ಷತ್ರಿಯ ಸಮುದಾಯದಿಂದ 50ನೇ ವರ್ಷದ ಸುವರ್ಣ ದಿಂಡಿ ಮಹೋತ್ಸವ ಬುಧವಾರ ಜರುಗಿತು.

ಉತ್ಸವದ ನಿಮಿತ್ತ ರಾಮನಗರದ ವಿಠ್ಠಲ ದೇವಸ್ಥಾನದಲ್ಲಿ ಕೊಪ್ಪಳದ ಕೃಷ್ಣಾಜೀ ಅಣ್ಣಾ ಡೊಂಗ್ರಪ್ಪ ಜ್ಞಾನಮೋರೆ ಮಾರ್ಗದರ್ಶನದಲ್ಲಿ 5ದಿನಗಳ ಕಾಲ ಭಜನೆ, ಅಖಂಡ ವೀಣಾ ಜಾಗರಣೆ, ಕೀರ್ತನೆಗಳು, ಕಾಕಡಾರತಿ, ಪಾರಾಯಣ, ನಾಮಜಪ, ಪ್ರವಚನ ನಡೆದವು.

ಕೊನೆಯ ದಿನವಾದ ಬುಧವಾರ ಬೆಳ್ಳಿ ರಥದಲ್ಲಿ ಪಾಂಡುರಂಗ ಮೂರ್ತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ, ಲಕ್ಷ್ಮೇಶ್ವರ, ಹುಬ್ಬಳ್ಳಿಯಿಂದ ಬಂದಿದ್ದ ಸಮುದಾಯದವರು ಭಾಗವಹಿಸಿದ್ದರು.