ಅರಕಲಗೂಡು ತಾಲೂಕು ಕುಂಚಿಟಿಗರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದ ಎಂ.ಟಿ.ಪಾಂಡುರಂಗ ಅವರನ್ನು ನಿರ್ದೇಶಕರು ಅಭಿನಂದಿಸಿದರು. ಕೃಷ್ಣೇಗೌಡ, ಕುಮಾರ್, ಅಣ್ಣೇಗೌಡ, ಅಶೋಕ್ ಇತರರು ಇದ್ದರು. 
ಜಿಲ್ಲೆ

ಕುಂಚಿಟಿಗರ ಸಂಘಕ್ಕೆ ಪಾಂಡುರಂಗ ಮರು ಆಯ್ಕೆ

ಅರಕಲಗೂಡು: ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷರಾಗಿ ಎಂ.ಟಿ. ಪಾಂಡುರಂಗ ಮರು ಆಯ್ಕೆಯಾದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೇಟೆ ಮಾಚಗೌಡನಹಳ್ಳಿ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಂಡುರಂಗ ಅವರನ್ನು 2024ರಿಂದ 2029ವರೆಗೆ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ಗೋವಿಂದೇಗೌಡ, ಉಪಾಧ್ಯಕ್ಷರಾಗಿ ಎಚ್.ವಿ.ಕೃಷ್ಣೇಗೌಡ, ವೈ.ಟಿ.ಕುಮಾರ್, ಅಣ್ಣೇಗೌಡ, ಖಜಾಂಚಿಯಾಗಿ ಪಿ.ಬಿ.ವಿರೂಪಾಕ್ಷ, ಕಾರ್ಯದರ್ಶಿಯಾಗಿ ಬಿ.ಆರ್.ಅಶೋಕ್, ಕಾರ್ಯಕಾರಿ ಆಡಳಿತ ಮಂಡಳಿ ನಿರ್ದೇಶಕರಾಗಿ ಬಿ.ಕೆ.ಚಂದ್ರೇಗೌಡ, ಎಚ್.ಎ.ಸತೀಶ್, ವಿಶ್ವನಾಥ್, ಎನ್.ಕೆ.ರಾಮೇಗೌಡ, ಎನ್.ಆರ್.ಭಾಸ್ಕರ್, ಕೆ.ಕೆ.ಹರೀಶ್, ದೇವರಾಜ್ ಅಲಿಯಾಸ್ ರವಿ, ಎಸ್.ಸಿ.ಮನುಕುಮಾರ, ಎಚ್.ಕೆ.ಮೋಹನಕುಮಾರ, ಎಚ್.ಬಿ.ಚೇತನ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎಂ.ಟಿ.ಪಾಂಡುರಂಗ ಮಾತನಾಡಿ, ಸಮಾಜದ ಸಂಘಟನೆ ಹಿತದೃಷ್ಟಿಯಿಂದ ಅಧ್ಯಕ್ಷ ಸ್ಥಾನದ ಮರು ಆಯ್ಕೆಗೆ ಒಪ್ಪಿದ್ದೇನೆ. ರಾಮನಾಥಪುರದಲ್ಲಿ ಜಾಗ ಖರೀದಿಸಿ ಸಮುದಾಯ ಭವನ ಹಾಗೂ ಸಂಘದ ಕಾರ್ಯಚಟುವಟಿಕೆಗೆ ಕಚೇರಿ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಪ್ರತಿವರ್ಷ ಸಮಾಜದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಮತ್ತಷ್ಟು ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.