ಜಿಲ್ಲೆ

ಅ.19ರಿಂದ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್ ಬಂದ್

Mangaluru - Hariprasad Rai



ಮಂಗಳೂರು : ವಾರ್ಷಿಕ ನಿರ್ವಹಣೆ ಕಾಮಗಾರಿಗಾಗಿ ಮಂಗಳೂರು ಸೆಂಟ್ರಲ್-ಬಂದರ್ ರೈಲ್ವೆ ಸ್ಟೇಷನ್ ಮಧ್ಯೆ ಇರುವ ಪಾಂಡೇಶ್ವರ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್ ಅ.19ರಂದು ರಾತ್ರಿ 8ರಿಂದ ಅ.22ರಂದು ಬೆಳಗ್ಗೆ 8ರವರೆಗೆ ಮುಚ್ಚಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಪಾಂಡೇಶ್ವರ-ಹೊಯ್ಗೆ ಬಜಾರ್ ಮುಖ್ಯ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ಪ್ರಕಟಣೆ ತಿಳಿಸಿದೆ.
....................