ಜಿಲ್ಲೆ

ತೋಟಕ್ಕೆ ನುಗ್ಗಿ ದಾಂದಲೆ ನಡೆಸಿದ ಪುಂಡಾನೆಗಳು

  • ಗೋಣಿಕೊಪ್ಪ: ಕಿರುಗೂರು ಗ್ರಾಮದಲ್ಲಿ ಶನಿವಾರ ರಾತ್ರಿ ಆನೆ ಹಿಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಾಶ ಪಡಿಸಿವೆ. ರೈತರಾದ ಗಾಣಂಗಡ ಉತ್ತಯ್ಯ, ಹರೀಶ್, ನವೀನ, ಕಾಕಮಾಡ ಮಾದಪ್ಪ, ಆಲೆಮಾಡ ಸಾಗರ್, ಪುಳ್ಳಂಗಡ ಪವನ್, ಗಾಣಂಗಡ ರಮೇಶ್, ಕಾಕಮಾಡ ಹರೀಶ್, ಪೂವಯ್ಯ ಎಂಬುವವರಿಗೆ ಸೇರಿದ ತೋಟಗಳಲ್ಲಿ ಬೆಳೆದಿದ್ದ ಮರ ಗೆಣಸು, ಬಾಳೆ, ತೆಂಗು ಬೆಳೆಗಳನ್ನು ತುಳಿದು ನಾಶ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.