ಕುಂದಾಪುರ: ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಐದು ಬೋಗಿ ಅಳವಡಿಸಲಾಗಿತ್ತು. ಆದರೆ ಈಗ ಪ್ರತಿನಿತ್ಯ ಈ ರೈಲು ಬೆಂಗಳೂರು ಮತ್ತು ಕಾರವಾರಕ್ಕೆ ಒಂದು ಗಂಟೆ ವಿಳಂಬವಾಗಿ ತಲುಪುತ್ತಿದ್ದು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪ್ರಯಾಣಿಕರು ಅಸವಾಧಾನ ತೋಡಿಕೊಂಡಿದ್ದಾರೆ. ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಯಶವಂತಪುರಕ್ಕೆ ಬೆಳಗ್ಗೆ 6.43ಕ್ಕೆ ತಲುಪಬೇಕಿತ್ತು. ಆದರೆ ಈಗ 1 ಗಂಟೆ ತಡವಾಗಿ ತಲುಪುತ್ತಿದೆ. ಕಾರವಾರಕ್ಕೆ ಬೆಳಗ್ಗೆ 8.25ಕ್ಕೆ ಬರಬೇಕಿದ್ದ ರೈಲು ಕೂಡ ವಿಳಂಬವಾಗುತ್ತಿದೆ. ಇದರಿಂದಾಗಿ ಈ ರೈಲಿನಲ್ಲಿ ಕಚೇರಿಗೆ ಅಥವಾ ಇನ್ನಿತರ ಕೆಲಸಕ್ಕೆ ಹೋಗುತ್ತಿದ್ದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ತಲುಪುತ್ತಿದ್ದಾಗ ವಾರದ ಎಲ್ಲ ದಿನವೂ ರೈಲು ಭರ್ತಿಯಾಗಿ ಸಂಚರಿಸುತ್ತಿತ್ತು. ವಿಳಂಬಕ್ಕೆ ಏನು ಕಾರಣ: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟಿ ವಿಭಾಗದ ಸಿರಿಬಾಗಿಲು ಎಂಬಲ್ಲಿ ರೈಲು ಸಂಖ್ಯೆ 16595 ಮತ್ತು ರೈಲು ಸಂಖ್ಯೆ 16596 ಪರಸ್ಪರ ದಾಟುತ್ತವೆ. ಹಿಂದೆ ಅವುಗಳಲ್ಲಿ ತಲಾ 14 ಬೋಗಿಗಳಿದ್ದವು. ಬೆಳಗ್ಗೆ ಸಂಚರಿಸುತ್ತಿದ್ದ ಕಾರವಾರ-ಯಶವಂತಪುರ ರೈಲು ರದ್ದಾದ ಬಳಿಕ ಪಂಚಗಂಗಾ ರೈಲಿ ಐದು ಬೋಗಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ವಾಡಲಾಗಿದೆ. ಸಿರಿಬಾಗಿಲುವಿನಲ್ಲಿರುವ ನಿರ್ಬಂಧಗಳಿಂದಾಗಿ ಎರಡು ರೈಲುಗಳನ್ನು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ದಾಟಿಸಲಾಗುತ್ತಿದೆ. ಹಾಸನ ಮತ್ತು ಚಿಕ್ಕಬಾಣಾವರ ನಡುವಿನ ವಿಳಂಬವನ್ನು ಸರಿದೂಗಿಸಲು ಬೆಂಗಳೂರು ಸೇವೆಯನ್ನು ವಿನ್ಯಾಸಗೊಳಿಸಲಾಗಿಲ್ಲ. ಇದರಿಂದಾಗಿ ರೈಲು ವಿಳಂಬವಾಗುತ್ತಿದೆ ಎನ್ನಲಾಗಿದೆ. ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಮೊದಲು ಸಂಚಾರದ ವೇಳಾಪಟ್ಟಿ ಖಚಿತಪಡಿಸಿಕೊಳ್ಳುವಂತೆ, ಹಾಗೂ ಬೆಂಗಳೂರು, ಕಾರವಾರ ತಲುಪಲು ವಿಳಂಬವಾಗದಂತೆ ನೋಡಿಕೊಳ್ಳಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬೋಗಿ ಸೇರ್ಪಡೆ ಬಳಿಕ ವಿಳಂಬವಾಗಿ ಸಂಚರಿಸುತ್ತಿರುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಪ್ರಯಾಣಿಕರು ಅಸವಾಧಾನ ವ್ಯಕ್ತಪಡಿಸಿದ್ದು, ಇದರ ಹಿಂದೆ ರೈಲು ಸೇವೆ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು-ಕಾರವಾರ ನಡುವೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಐದು ಬೋಗಿಗಳನ್ನು ಸೇರಿಸಿದ ಬಳಿಕ ರೈಲು ವಿಳಂಬವಾಗಿ ಬೆಂಗಳೂರಿಗೆ ತಲುಪುತ್ತಿದೆ. ಈ ಬಗ್ಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು, ವ್ಯವಸ್ಥೆ ಸರಿಪಡಿಸುವಂತೆ ಮತ್ತು ಈ ಹಿಂದಿನ ವೇಳಾಪಟ್ಟಿಯಂತೆ ರೈಲು ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ವಾಡಲಾಗಿದೆ. -ಗಣೇಶ ಪುತ್ರನ್, ಅಧ್ಯಕ್ಷರು, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಕುಂದಾಪುರ https://www.vijayavani.net/cow-theft-on-the-rise-in-gangolli https://www.vijayavani.net/narendra-modi-has-increased-the-countrys-fame-and-respect