ಜಿಲ್ಲೆ

ಮಾರ್ನಬೈಲು ಅಯ್ಯಪ್ಪ ಮಂದಿರದಲ್ಲಿ ಪಂಚಾರತಿ

ಸೌಮ್ಯ ಆರ್

ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಮಂದಿರದ ಅಭಿವೃದ್ಧಿ ಹಾಗೂ ಭೂಮಿ ಖರೀದಿಯ ಸಂಕಲ್ಪ ಸಿದ್ಧಿಗಾಗಿ 18 ಗುರುವಾರಗಳ ಕಾಲ ನಡೆಯುವ ಪಂಚಾರತಿ ಸೇವೆಯ 4ನೇ ವಾರದ ಸೇವೆಯಲ್ಲಿ ಪಂಚ ಅಭ್ಯಾಗತರಾಗಿ ರತ್ನಾಕರ ಶೆಟ್ಟಿ ಕಲ್ಲಡ್ಕ, ಕೃಷ್ಣ ಬಿ.ಜೋಗೊಟ್ಟು ಅಮ್ಟೂರು, ಸಂಜೀವ ಬಿ.ಶೆಟ್ಟಿ ಬೋಳಂತೂರುಗುತ್ತು, ನಾಗೇಶ್ ಕುಲಾಲ್ ನರಿಕೊಂಬು, ರಾಮಕೃಷ್ಣ ಪೂಜಾರಿ ಮಿತ್ತಮಜಲು ಶ್ರೀ ದೇವರಿಗೆ ಪಂಚಾರತಿ ಬೆಳಗಿದರು.

ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ.ಮಾರ್ನಬೈಲು ಪ್ರಸ್ತಾವನೆಗೈದರು. ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಕಾರ್ಯದರ್ಶಿ ಯಶವಂತ ಕೆ.ಪುತ್ತೂರು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಪದಾಧಿಕಾರಿಗಳಾದ ನಾಗೇಶ್ ಕುಲಾಲ್, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ದಯಾನಂದ ಬಿ.ಎಂ. ಕಂದೂರು, ಸುಧೀರ್ ನಾಯಕ್ ನಂದಾವರ, ಗಣೇಶ್ ದೇವಾಡಿಗ ದಾಸರಗುಡ್ಡೆ, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ವಸಂತ್ ಕೊಲ್ಲುಕೋಡಿ, ಅವಿನಾಶ್ ಗಟ್ಟಿ ಮಾರ್ನಬೈಲು, ರಕ್ಷಿತಾ ರಂಜಿತ್, ಪ್ರಮೀಳಾ ಗಣೇಶ್, ನಾರಾಯಣ ದಾಸರಗುಡ್ಡೆ, ನಿತಿನ್ ಕುಮಾರ್, ಸಂತೋಷ್ ಆಚಾರ್ಯ, ದೀಪ್ತೇಶ್ ಮೆಲ್ಕಾರ್, ಲಕ್ಷ್ಮಣ ಗಟ್ಟಿ ನಂದಾವರ, ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ, ಮಾಧವ ನಾಯ್ಕ ಮತ್ತಿತರರಿದ್ದರು.