ಹುಬ್ಬಳ್ಳಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕೈಗೊಳ್ಳಲಿರುವ ಬೃಹತ್ ಹೋರಾಟದ ಹಿನ್ನೆಲೆಯಲ್ಲಿ ಶುಕ್ರವಾರ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.
ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಡಿ. 10ರಂದು ನಡೆಯುವ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಹುಬ್ಬಳ್ಳಿಯಿಂದ 10 ಸಾವಿರಕ್ಕೂ ಅಧಿಕ ಸಮಾಜ ಬಾಂಧವರನ್ನು ಕರೆದೊಯ್ದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಣಯ ತೆಗೆದುಕೊಳ್ಳಲಾಯಿತು. ಇದರೊಂದಿಗೆ ಶ್ರೀಗಳ ಕೈ ಬಲ ಪಡಿಸಲು ತೀರ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಶಶಿಶೇಖರ ಡಂಗಣವರ, ಜಿ.ಜಿ. ದ್ಯಾವನಗೌಡ್ರ, ಈಶ್ವರ್ ಶಿರಸಂಗಿ, ರಾಜು ಕೊಟಗಿ, ವಿ.ವಿ. ಕುರ್ತಕೋಟಿ, ಎಚ್.ವಿ. ಬೆಳಗಲಿ, ರಾಜಶೇಖರ್ ಕರ್ಕಂಣ್ಣವರ, ವಿ.ಎಸ್. ಕಂಟೆಪ್ಪಗೌಡ್ರ, ಸುರೇಶ ಲಿಂಬಿಕಾಯಿ, ಸುರೇಶ ಹೊರಕೇರಿ, ಶಂಕ್ರಗೌಡ ಸಾತಮಾರ, ಕಿಶೋರ ಶಿರಸಂಗಿ, ಆನಂದ ಆಲಾದಿ, ಕಲ್ಲಪ್ಪ ಶಾವಿನ್ನವರ, ಮಹೇಶ್ ಕಳ್ಳಿಮನಿ, ಉಪಸ್ಥಿತರಿದ್ದರು.