ಉಡುಪಿ: ಕಾಂತಾರ ಸಿನೆಮಾ ದೈವಪ್ರೇರಿತ. ನಾನು ಯಾವುದೇ ಉದ್ದೇಶ ಇಟ್ಟುಕೊಂಡು ಸಿನೆಮಾ ಮಾಡಿಲ್ಲ. ದೈವಗಳ ಮೇಲೆ ಭಕ್ತಿ ಗೌರವಕ್ಕೆ ಚ್ಯುತಿಯಾಗದಂತೆ ಸಿನೆಮಾ ಮಾಡಿದ್ದೆ. ಈ ಮೂಲಕ ದೈವದ ಸೇವೆ ಮಾಡುವ ಅವಕಾಶ ಲಭಿಸಿತ್ತು ಎಂದು ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಹೇಳಿದರು.
ಭಾನುವಾರ ಕೃಷ್ಣ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜಸೇವಾ ಸಂ ವತಿಯಿಂದ ಜಿಲ್ಲಾ ಪಾಣರ ಸಂದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಣ ಯಾನೆ ನಲಿಕೆಯವರ ಸಮಾಜದ ಹಿರಿಯರಿಗೆ ಗೌರವಾರ್ಪಣೆ ಮಾಡಿ ಅವರು ಮಾತನಾಡಿದರು.
ಮುಂದಿನ ಜನ್ಮದಲ್ಲಿ ಪಾಣಾರ ಸಮುದಾಯದಲ್ಲಿ ಹುಟ್ಟಿ ದೈವದ ಚಾಕರಿ ಮಾಡುವ ಅವಕಾಶ ಸಿಗಲಿ ಎಂಬುದಾಗಿ ಬಯಸುತ್ತೇನೆ. ಕಾಂತಾರಕ್ಕೆ ಈ ಮಟ್ಟಿನ ಯಶಸ್ಸು ಬರಲು ದೈವದ ಅಶೀರ್ವಾದವೇ ಕಾರಣ ಎಂದು ಹೇಳಿದರು.
ದೈವನರ್ತಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಟ್ರಸ್ಟ್ನಿಂದ ಸಹಾಯ ನೀಡಲಾಗುವುದು. ಮಕ್ಕಳು ವಿದ್ಯಾವಂತರಾಗುವ ಜೊತೆಗೆ ನಮ್ಮ ಆಚಾರ&ವಿಚಾರ, ದೈವಾರಾಧನೆ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಿ, ಸೂರ್ಯಚಂದ್ರರು ಇರುವವರೆಗೆ ದೈವಾರಾಧನೆ ಕಾಯಕ ಮುಂದುವರಿಯಬೇಕು. ಹಿಂದೂ ಧರ್ಮದ ಉಳಿವಿಗೆ ಇದು ಅತೀ ಅಗತ್ಯವಾಗಿದೆ ಎಂದರು,
ಸಂದ ಅಅಧ್ಯಕ್ಷ ಪಾಂಡುರಂಗ ಎಸ್ ಪಡ್ಡಂ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅಚಾರ್ಯ, ಬ್ಲಾಕ್ ಅಧ್ಯಕ್ಷ ದೈವ ನರ್ತಕ ಗುಡ್ಡ ಪಾಣಾರ, ನಾಗರಾಜ್ ಪಾಣಾ, ಬೊಗ್ರ ಶೇರಿಗಾರ್, ಮುನ್ನ ಎರ್ಮಾಳ್, ಸಾಧು ಪಾಣ, ಸುಬ್ಬ ಪಾಣ ಕುಕ್ಕೆಹಳ್ಳಿ, ಪದ್ಮನಾಭ ಮೂಡುಬಿದ್ರೆ, ಲಲಿತಾ ಸಖಾರಾಮ್, ಉದ್ಯಮಿ ರಾಯಲ್ ರತ್ನಾಕರ ಶೆಟ್ಟಿ, ಉದ್ಯಮಿ ಸದಾಶಿವ ಹೆಗ್ಡೆ, ತುಳು ಸಾಹಿತಿ ದಯಾನಂದ ಕತ್ತಲ್ಸಾರ್, ಪ್ರಧಾನ ಕಾರ್ಯದರ್ಶಿ ಸುಕೇಶ್ ಪಾಣ, ಉಪಾಧ್ಯಕ್ಷ ಸುಧಾಕರ ಪಾಣ ಮೂಡುಬೆಳ್ಳೆ, ಸಂದ ಸಂಘಟನಾ ಕಾರ್ಯದರ್ಶಿ ರಮೇಶ್ ಶಿರ್ಲಾಲ್, ದೈವಾರಾಧನೆಯ ಸಮಿತಿ ಸಲಹೆಗಾರ ವಿಜಯ ಪಾಣ ತೋನ್ಸೆ ಉಪಸ್ಥಿತರಿದ್ದರು.