ಜಿಲ್ಲೆ

ಪಂಚಮಸಾಲಿ ಸೊಸೈಟಿ ಸಭೆ

Dharwada - Basavaraj Idli

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಕೋ ಆಪ್ ಕ್ರೆಡಿಟ್ ಸೊಸೈಟಿಯ 2022&23ನೇ ಸಾಲಿನ ವಾಷಿರ್ಕ ಮಹಾಸಭೆ ಇತ್ತೀಚೆಗೆ ಇಲ್ಲಿಯ ಎಪಿಎಂಸಿ ಯಾರ್ಡ್ ಸೊಸೈಟಿಯಲ್ಲಿ ಜರುಗಿತು.

ಸೊಸೈಟಿ ಸದಸ್ಯರಾದ ಮಹದೇವಪ್ಪ ಮೆಣಸಿನಕಾಯಿ, ಬಿ.ಎಸ್. ಪಾಟೀಲ, ಬಿ.ಎನ್. ಹೊಸಕೇರಿ, ಎಸ್.ಎಸ್. ಪಾಟೀಲ, ವಿ.ಎ್. ಕಟ್ಟಿಮನಿ, ಬಿ.ಜಿ. ಮೇಟಿ, ಎಂ.ವೈ. ಗಂಡೂಡಿ, ಎಸ್.ಎ್. ಸವದಿ, ಚಂದ್ರಶೇಖರ ಉಪ್ಪಿನ, ಎಂ.ಡಿ. ಮೆಣಸಿನಕಾಯಿ, ಜಿ.ಐ. ಇಚ್ಚಂಗಿ, ಪರಪ್ಪ ಮೆಣಸಿನಕಾಯಿ, ವಿ.ಡಿ. ಶಿಮಿಕೇರಿ, ಪಿ.ಎ್. ಮಲಕಣ್ಣವರ, ಸುನಂದಾ ದಂಡಿನ, ಶಕುಂತಲಾ ಬೆಲ್ಲದ, ಪ್ರಭಾವತಿ ಉಪ್ಪಿನ, ಡಾ. ಸಿ.ಎಂ. ಕಡಕೋಳ, ಇತರರು ಸೊಸೈಟಿ ಅಭಿವೃದ್ಧಿ ಕುರಿತು ಸಲಹೆ ಸೂಚನೆ ನೀಡಿದರು.

ಶೋಭಾ ಬೆಲ್ಲದ ಪ್ರಾರ್ಥನೆ ಹಾಡಿದರು. ನಿರ್ದೇಶಕ ವಿರುಪಾಕ್ಷಗೌಡ ಭರಮಗೌಡ್ರ ಸ್ವಾಗತಿಸಿದರು. ಪ್ರಭಾರ ವ್ಯವಸ್ಥಾಪಕ ನಿಂಗಪ್ಪ ಹುಲಿಕಟ್ಟಿ ಠರಾವ್ ಮಂಡಿಸಿದರು. ಸೊಸೈಟಿ ಅಧ್ಯಕ್ಷ ಗಂಗನಗೌಡ ಪಾಟೀಲ ವಾಷಿರ್ಕ ವರದಿ ಮಂಡಿಸಿದರು. ಉಪಾಧ್ಯಕ್ಷ ಗಂಗಾಧರ ನೀಲಣ್ಣವರ ವಂದಿಸಿದರು.

ರಾಜಕಿರಣ ಮೆಣಸಿನಕಾಯಿ, ರುದ್ರಪ್ಪ ಬೆಟಗೇರಿ, ನಿಂಗಪ್ಪ ಹುಲಿಕಟ್ಟಿ, ಗಂಗಾಧರ ಬಂಗಾರಗುಂಡ, ಇತರರು ಉಪಸ್ಥಿತರಿದ್ದರು.