ಜಿಲ್ಲೆ

ಪಂ. ಬಾಲಚಂದ್ರ ನಾಕೋಡ ದಾಸವಾಣಿ ಇಂದು

Gadag - Desk - Tippanna Avadoot

ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ ನಿಮಿತ್ತ ಸೆ. 2ರಂದು ಸಂಜೆ 6ರಿಂದ 7.30ರವರೆಗೆ ದಾಸವಾಣಿ ಕಾರ್ಯಕ್ರಮ ಏರ್ಪಾಟಾಗಿದೆ.


ಪಂ. ಬಾಲಚಂದ್ರ ನಾಕೋಡ ದಾಸವಾಣಿ ಪ್ರಸ್ತುತಪಡಿಸುವರು. ಮನುಕುಮಾರ ಹಿರೇಮಠ ಮತ್ತು ರಾಘವೇಂದ್ರ ನಾಕೋಡ ತಬಲಾ, ಮಂಜುನಾಥ ಇಂಗಳಳ್ಳಿ ಹಾಮೋನಿಯಂ, ಮನೋಹರ ಜೋಶಿ ತಾಳ ಸಾಥ್ ನೀಡುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.