ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ತಾಳೆ ಬೆಳೆ ಕುರಿತು ಜಾಗೃತಿ ಮೂಡಿಸಲಾಯಿತು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ.ಶಂಕರ್, ರೈತರಾದ ವೈ.ರಮಣಯ್ಯ, ಹನುಮಂತರಾವ್, ರಘುರಾಮ್ ಇತರರಿದ್ದರು. 
ಜಿಲ್ಲೆ

ತಾಳೆ ಬೆಳೆಯಲು ಮುಂದಾಗಿ

ಕಂಪ್ಲಿ: ಖಾದ್ಯತೈಲ ಸ್ವಾವಲಂಬನೆ ಸಾಧಿಸಲು ತಾಲೂಕಿನ ರೈತರು ತಾಳೆ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ.ಶಂಕರ್ ಹೇಳಿದರು.

ನಂ.3 ಸಣಾಪುರ ಗ್ರಾಮದ ತಾಳೆ ಬೆಳೆಗಾರರಾದ ಹನುಮಂತರಾವ್, ರಘುರಾಮ್ ಅವರ ತೋಟದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಳೆ ಬೆಳೆ ಯೋಜನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದೇಶದಿಂದ ಖಾದ್ಯತೈಲ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು ಸ್ಥಳೀಯ ರೈತರು ಹೆಚ್ಚಿನ ಪ್ರಮಾಣದ ತಾಳೆ ಬೆಳೆಯಬೇಕಿದೆ. ತಾಳೆ ಬೆಳೆಗೆ ಬೆಂಬಲ ಬೆಲೆ ಹಾಗೂ ಇಲಾಖೆಯ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ. ತಾಲೂಕಿನಲ್ಲಿ 45 ಹೆಕ್ಟೇರ್ ಸೇರಿದಂತೆ ಜಿಲ್ಲೆಯಾದ್ಯಂತ 500 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ. ಜು.31ರೊಳಗೆ ಒಂದು ಹೆಕ್ಟೇರ್‌ಗೆ 5375 ರೂ. ಮೊತ್ತದ ವಿಮೆ ಪಾವತಿಸಿ ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಬೇಕೆಂದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್.ರವಿ, ಗ್ರಾಪಂ ಅಧ್ಯಕ್ಷ ವೈ.ರಮಣಯ್ಯ, ತಾಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಟಿ.ಸುನೀಲ್ ಕುಮಾರ್, ತಾಪಂ ಮಾಜಿ ಸದಸ್ಯ ವೆಂಕಟರಾಮರಾಜು, ಎಸ್.ಹಿರೇಮಠ ಇತರರಿದ್ದರು.