ಜಿಲ್ಲೆ

ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ

ಮಂಜುನಾಥ ಅಂಗಡಿ

ಧಾರವಾಡ: ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ಇತ್ತೀಚೆಗೆ ತೋಟಗಾರಿಕೆ ಇಲಾಖೆ ಹಾಗೂ ೩ಎಫ್ ಆಯಿಲ್ ಪಾಮ್ ಕಂಪನಿ ಸಹಯೋಗದಲ್ಲಿ ತಾಲೂಕಿನ ತಿಮ್ಮಾಪೂರ ಗ್ರಾಮದ ಮಹಾಂತಯ್ಯ ಹಿರೇಮಠ ಅವರ ಹೊಲದಲ್ಲಿ ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ ಬೆಳೆ ಪ್ರದೇಶ ವಿಸ್ತರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶಿವಲೀಲಾ ವಿನಯ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಮರೇವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಽಕಾರಿ ಮಹೇಶ ಪಟ್ಟಣಶೆಟ್ಟಿ ಹಾಗೂ ೩ಎಫ್ ಆಯಿಲ್ ಪಾಮ್ ಕಂಪನಿಯ ಏರಿಯಾ ಮ್ಯಾನೇಜರ್ ಮೃತ್ಯುಂಜಯ ಪಾಟೀಲ ಹಾಗೂ ಮರೇವಾಡ, ತಿಮ್ಮಾಪೂರ ಹಾಗೂ ಅಮ್ಮಿನಬಾವಿ ಗ್ರಾಮಗಳ ರೈತರು ಮತ್ತು ಗ್ರಾ.ಪಂ. ಸದಸ್ಯರಿದ್ದರು.