ತುಮಕೂರು : ಮಹಾನಗರ ಪಾಲಿಕೆ 4 ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ಕಾಂಗ್ರೆಸ್‌ನ ಟಿ.ಎಂ.ಮಹೇಶ್ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜೆಡಿಎಸ್‌ನ ಟಿ.ಕೆ.ನರಸಿಂಹಮೂರ್ತಿ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಾಲಿಕೆ ಸಭಾಂಗಣದಲ್ಲಿ ಗುರುವಾರ ಮೇಯರ್ ಫರಿದಾಬೇಗಂ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಮೊದಲಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿ ಪರಿಶೀಲನೆ ಬಳಿಕ ಹಿಂಪಡೆಯಲು ಸಮಯಾವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ 4 ಸ್ಥಾಯಿ ಸಮಿತಿಗಳಿಗೆ ನಾಲ್ವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಎಲ್ಲರ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಫರಿದಾಬೇಗಂ ಎಲ್ಲರ ಹೆಸರು ಪ್ರಕಟಿಸಿದರು.
ಬಿಜೆಪಿಗೆ 2 ಸ್ಥಾಯಿಸಮಿತಿ: ಹಣಕಾಸು ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ ತನ್ನಲ್ಲೇ ಇಟ್ಟುಕೊಂಡು, ಆರೋಗ್ಯ ಸ್ಥಾಯಿಸಮಿತಿಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಉಳಿದ ಪಟ್ಟಣ ಯೋಜನೆ ಹಾಗೂ ಲೆಕ್ಕಪತ್ರ ಸ್ಥಾಯಿಸಮಿತಿ ಬಿಜೆಪಿ ಪಾಲಾಯಿತು. ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಪಟ್ಟಣ ಯೋಜನೆ ಹಾಗೂ ಸುಧಾರಣಾ ಸ್ಥಾಯಿಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಚಂದ್ರಕಲಾ ಆಯ್ಕೆಯಾದರು. ಉಪಮೇಯರ್ ಶಶಿಕಲಾ, ಆಯುಕ್ತ ಟಿ.ಭೂಬಾಲನ್ ಉಪಸ್ಥಿತರಿದ್ದರು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಟಿ.ಎಂ.ಮಹೇಶ್-ಅಧ್ಯಕ್ಷ, ಸದಸ್ಯರು: ಷಕೀಲ್ ಅಹಮದ್ ಷರೀಫ್, ಮುಜಿದಾ ಖಾನಂ, ನೂರುನ್ನೀಸಾ ಬಾನು (ಕಾಂಗ್ರೆಸ್), ಧರಣೇಂದ್ರ ಕುಮಾರ್, ಬಿ.ಎಸ್.ಮಂಜುನಾಥ್ (ಜೆಡಿಎಸ್), ನಳಿನ (ಬಿಜೆಪಿ)
ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಟಿ.ಕೆ.ನರಸಿಂಹಮೂರ್ತಿ -ಅಧ್ಯಕ್ಷ, ಸದಸ್ಯರು: ಲಲಿತಾ, ಎ.ಶ್ರೀನಿವಾಸ್ (ಜೆಡಿಎಸ್), ಸೈಯದ್ ನಯಾಜ್, ಎಂ.ಪ್ರಭಾವತಿ (ಕಾಂಗ್ರೆಸ್), ಎಚ್.ಎಂ.ದೀಪಶ್ರೀ, ಬಿ.ಜಿ.ಕೃಷ್ಣಪ್ಪ (ಬಿಜೆಪಿ)
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಎಚ್.ಮಲ್ಲಿಕಾರ್ಜುನಯ್ಯ-ಅಧ್ಯಕ್ಷ , ಸದಸ್ಯರು: ವಿ.ಎಸ್.ಗಿರಿಜಾ, ಎಚ್.ಎಸ್.ನಿರ್ಮಲಾ, ಬಿ.ಜಿ.ವೀಣಾ , ಎಂ.ಸಿ.ನವೀನಾ (ಬಿಜೆಪಿ) ನಾಸಿರಾಬಾನು (ಪಕ್ಷೇತರ), ಬಿ.ಎಸ್.ರೂಪಶ್ರೀ (ಕಾಂಗ್ರೆಸ್).
ಲೆಕ್ಕಪತ್ರ ಸ್ಥಾಯಿ ಸಮಿತಿ: ಚಂದ್ರಕಲಾ-ಅಧ್ಯಕ್ಷೆ, ಸದಸ್ಯರು: ಕೆ.ಎಸ್.ಮಂಜುಳಾ, ಎಸ್. ಮಂಜುನಾಥ್, ಸಿ.ಎನ್.ರಮೇಶ್, ಇನಾಯತುಲ್ಲಾ ಖಾನ್, ಜೆ.ಕುಮಾರ್, ವಿಷ್ಣುವರ್ಧನ್.
ಎಸ್‌ಎಸ್ ಸರ್ಕಲ್‌ನಲ್ಲಿ ಶ್ರೀಗಳ ಪುತ್ಥಳಿ: ನಗರದ ಎಸ್.ಎಸ್.ಸರ್ಕಲ್‌ನಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿ ಸ್ಥಾಪಿಸಲಾಗುವುದು. ಅಲ್ಲಿ ಉದ್ಯಾನ ಅಭಿವೃದ್ಧಿಪಡಿ ಸಲಾಗುವುದು. ಶ್ರೀಗಳ ಪುತ್ಥಳಿ ನಿರ್ಮಿಸಲು ರೋಟರಿ ಕ್ಲಬ್ 30 ಲಕ್ಷ ರೂ., ನೀಡುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಉದ್ಯಾನವನ ಅಭಿವೃದ್ಧಿಪಡಿ ಸಲಾಗುವುದು ಎಂದು ಮೇಯರ್ ಹೇಳಿದರು.
4 ತಿಂಗಳಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ಎಸ್‌ಎಸ್ ಸರ್ಕಲ್‌ನಲ್ಲಿ ಸ್ಥಾಪಿಸಲಾಗುವುದು. ಪುತ್ಥಳಿಯ ತಳಭಾಗದಲ್ಲಿ 4 ಕಡೆ ಶ್ರೀಗಳ ವಾಣಿಯನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತನೆ ಮಾಡುವ ಮೂಲಕ ಶ್ರೀಗಳ ಸಂದೇಶಗಳನ್ನು ಸಾರುವುದು ನಮ್ಮ ಉದ್ದೇಶವಾಗಿದೆ. ಟಿ.ಭೂಬಾಲನ್ ಆಯುಕ್ತ ಶ್ರೀಗಳ ಪುತ್ಥಳಿ ಸ್ಥಾಪನೆ ಸ್ವಾಗತಾರ್ಹ. ಅದೇ ರೀತಿ ಶಿರಾ ಭಾಗದಿಂದ ನಗರ ಪ್ರವೇಶಿಸುವ ಶಿರಾಗೇಟ್ ಬಳಿ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಪಾಲಿಕೆ ವತಿಯಿಂದ ಸ್ಥಾಪಿಸಬೇಕು. ಈ ಹಿಂದೆ 10 ಲಕ್ಷ ರೂಪಾಯಿಯನ್ನು ಪ್ರತಿಮೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ನಳಿನಾ ಬಿಜೆಪಿ ಸದಸ್ಯೆ