-ದಶಕಗಳ ಬಳಿಕ ಕನಸು ನನಸು ಮಾಡಿದ ಸರ್ಕಾರ
ಬೆಳಗಾವಿ: ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಶಕಗಳಿಂದ ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 368 ಪೌರಕಾರ್ಮಿಕರಿಗೆ ಕೊನೆಗೂ ನೇಮಕಾತಿ ಆದೇಶ ಕೈ ಸೇರಲಿದೆ.
ಸುವರ್ಣವಿಧಾನಸೌದದ ಸೆಂಟ್ರಲ್ ಸಭಾಂಗಣದಲದಲಿ ಗುರುವಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಪತ್ರವನ್ನು ವಿತರಿಸಲಿದ್ದಾರೆ.
ಪಾಲಿಕೆ-೧೫೫, ನಗರಸಭೆಗಳಾದ ಗೋಕಾಕ-೧೯,ನಿಪ್ಪಾಣಿ-೧೪, ಪುರಸಭೆ-೧೪೪, ಪಟ್ಟಣ ಪಂಚಾಯತಿಯಲ್ಲಿ-೩೭ ಸೇರಿದಂತೆ ೩೬೮ ಪೌರ ಕಾರ್ಮಿಕರಿಗೆ ಆದೇಶ ಪ್ರತಿ ಸಿಗಲಿದೆ.
ಹಲವು ದಶಕಗಳಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಪೌರ ಕಾರ್ಮಿಕರು ಸೇವಾ ಭದ್ರತೆ ಹಿನ್ನೆಲೆ ಆತಂಕ ಎದುರಿಸುತ್ತಿದ್ದರು. ಇದೀಗ ಸರ್ಕಾರದ ನಿರ್ಧಾರದಿಂದ ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಂತಾಗಿದೆ.
***