ಬೆಳಗಾವಿ: ಸ್ಮಾರ್ಟ್ ಸಿಟಿ ಸ್ವಚ್ಛತೆಗೆ ಸಂಕಲ್ಪ ತೊಟ್ಟಿರುವ ಮಹಾನಗರ ಪಾಲಿಕೆಆಯುಕ್ತ ಅಶೋಕ ದುಡಗುಂಟಿ ಮಂಗಳವಾರ ಬೆಳ್ಳಂಬೆಳಗ್ಗೆ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಪಾಲಿಕೆಯ ವಾಹನಗಳ ಗ್ಯಾರೇಜ್ ಭೇಟಿ ಮಾಡಿ ಅಲ್ಲಿಯ ವಾಹನ ಚಾಲಕರ ಹಾಜರಾತಿ ನಂತರ ಡೋರ್ ಟು ಡೋರ್ ವಾಹನ ಮೂಲಕ ದಕ್ಷಿಣ ಮತಕ್ಷೇತ್ರದ ಕೆಲವು ವಾರ್ಡ್ , ಕಚೇರಿ ಗಲ್ಲಿಯ ಬೀಟ್ ಆಫೀಸ್ ನಲ್ಲಿ ವಾರ್ಡ್ ಕಾರ್ಪೊರೇಟ್ ರ ,ಆರೋಗ್ಯ ನಿರೀಕ್ಷಕರು ಹಾಗೂ ಎಇಇ (ಪರಿಸರ) ಜತೆ ನಾಲಾ ಪರಿಶೀಲನೆ ನಡೆಸಿದರು.
ಇದೇ ವೇಳೆ ನಗರದ ವಿವಿಧ ಕಡೆ ಖಾಸಗಿ ಓಪನ್ ಪ್ಲಾಟ್ ನಲ್ಲಿ ಗಿಡ ಗಂಟಿಗಳು ಬೆಳೆದು ಕಾಡು ಆಗಿದ್ದನ್ನು ಗಮನಿಸಿ ಮಾಲೀಕರಿಗೆ ಪಾಲಿಕೆ ಆಕ್ಟ್ ಪ್ರಕಾರ ನಿಯಮಾನುಸಾರ ಸ್ವಚ್ಚ ಮಾಡದೆ ಇದ್ದರೆ ಪಾಲಿಕೆಯಿಂದ ಸ್ವಚ್ಛ ಮಾಡಿಸಿ ಅದರ ಖರ್ಚು ವೆಚ್ಚ ಸದ್ರಿ ಮಾಲಿಕರಿಂದ ಬರಿಸಲು ತಿಳಿಸಿದರು.
ಬಳಿಕ ರೈಲ್ವೆ ನಿಲ್ದಾಣದಿಂದ ಬರುವ UGD ತ್ಯಾಜ್ಯ ನೀರಿನ ಬಗ್ಗೆ ಅಲ್ಲಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಸೂಚಿಸಿದರು. ಅಲ್ಲದೆ ತರಕಾರಿ ಮಾರ್ಕೆಟ್ ನಲ್ಲಿ ರಾತ್ರಿ 10.00 ನಂತರ ಕಸ ವಿಲೇವಾರಿಗೆ ಸೂಚಿಸಿದರು.