ಬೆಳಗಾವಿ:ಬೆಳಗಾವಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ತುಂಬಿರುವ ಹಿನ್ನೆಲೆ ಮಂಗಳವಾರ ಪಾಲಿಕೆ ಮೇಯರ್, ಉಪಮೇಯರ್, ಸದಸ್ಯರು, ಆಯುಕ್ತರು, ಅಽಕಾರಿಗಳು ಗಂಗಾಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.
ಕಳೆದ ಮೂರು ವಾರಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಸಂಪ್ರದಾಯ ಪ್ರಕಾರ ಪ್ರತಿ ವರ್ಷದಂತೆಯೇ ಗಂಗಾಪೂಜಿ ನೆರವೇರಿಸಿ ವರ್ಷವೀಡಿ ಬೆಳಗಾವಿ ಮಹಾನಗರಕ್ಕೆ ಪೂರೈಕೆಯಾಗುವಷ್ಟು ನೀರು ಸಂಗ್ರಹವಾಗಿರಲಿ ಎಂದು ಪಾಲಿಕೆ ಸದಸ್ಯರು ಪ್ರಾರ್ಥಿಸಿದರು.
ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪಾಲಿಕೆ ಸದಸ್ಯರು, ಅಽಕಾರಿಗಳು ಇದ್ದರು.