ಜಿಲ್ಲೆ

ಸಿರಿಗೆರೆಯಲ್ಲಿ ಪಲ್ಲಕ್ಕಿ ಉತ್ಸವ

Davangere - Desk - Mahesh Babu E

ಸಿರಿಗೆರೆ: ಗ್ರಾಮದ ಕಲ್ಲೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿಯ ಮೆರವಣಿಗೆ ಆ.20ರಂದು ನಡೆಯಲಿದೆ. ಸಂಜೆ 6ಕ್ಕೆ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.

ಆ.21ರಂದು ಶ್ರಾವಣ ಮಾಸದ ಅನ್ನದಾಸೋಹ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೆ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಅನ್ನದಾಸೋಹ: ಶ್ರಾವಣ ಮಾಸದ ಅಂಗವಾಗಿ ಸಿರಿಗೆರೆ ಗ್ರಾಮದ ಶಿವನಾರದಮುನಿ ದೇವಸ್ಥಾನದ ಆ.19ರ ಶನಿವಾರ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ನಾರದಮುನಿ ಸಭಾಭವನದಲ್ಲಿ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ.