ಜಿಲ್ಲೆ

ಶಿರೋಳದಲ್ಲಿ ಪಲ್ಲಕ್ಕಿ ಉತ್ಸವ, ಗುಗ್ಗಳೋತ್ಸವ ಸಂಭ್ರಮ

ಶಿರೋಳ: ಗ್ರಾಮದ ಹಿರೇಮಠದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿಯಿಂದ ಸ್ಥಾಪಿತಗೊಂಡ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಪಲ್ಲಕ್ಕಿ ಉತ್ಸವ, ಗುಗ್ಗಳೋತ್ಸವ ಕಾರ್ಯಕ್ರಮ ನೆರವೇರಿದವು.

ಗ್ರಾಮದ ಶ್ರೀ ಬೀರಲಿಂಗೇಶ್ವರ ಯುವಕ ಮಂಡಳದ ಕರಡಿ ಮೇಳ, ಡೊಳ್ಳಿನ ಮೇಳ, ವೀರಪುರವಂತರ ಸಮ್ಮುಖದಲ್ಲಿ ಪಲ್ಲಕ್ಕಿ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.

ಶಿರೋಳ ಗ್ರಾಮದ ಬಸ್ ನಿಲ್ದಾಣ, ಬಜಾರ ಮಾರುತಿ, ಬಸವೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ, ಮರುಡಿ ಮಾರುತಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನದ ಮೂಲಕ ವೀರಭದ್ರೇಶ್ವರ ದೇವಸ್ಥಾನ ತಲುಪಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಶಸ್ತ್ರವನ್ನು ಹಾಕಿಸಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಗುಗ್ಗಳೋತ್ಸವದ ಬಳಿಕ ಭಕ್ತರಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.