ಜಿಲ್ಲೆ

ಪಂಜುರ್ಲಿ ದೈವದ ವಾರ್ಷಿಕ ಪೂಜೆ

ಎ. ಆರ್. ರಘುರಾಮ

ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಪಂ ವ್ಯಾಪ್ತಿಯ ಸುಳಗಳಲೆ ಗ್ರಾಮದಲ್ಲಿರುವ ಪಂಜಿರ್ಲಿ ದೈವದ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ದೇವರ ಗುಡಿಯಲ್ಲಿ ವಿವಿಧ ಹೋಮ, ಹವನ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಸಂದರ್ಭ ನವಗ್ರಹ, ಲಕ್ಷ್ಮೀ ನಾರಾಯಣ, ದುರ್ಗಾ, ಮೃತ್ಯುಂಜಯ ಮತ್ತು ಗಣಹೋಮ ನಡೆಸಿ ಪೂರ್ಣಾಹಿತಿ ಅರ್ಪಿಸಲಾಯಿತು.
ಅರ್ಚಕರಾದ ಮಂಜುನಾಥ ಶರ್ಮ, ಲಿಂಗಪ್ಪ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು. ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಸ್.ಸಿ.ಶರತ್‌ಶೇಖರ್, ದುಂಡಳ್ಳಿ ಗ್ರಾ.ಪಂ.ಸದಸ್ಯ ಸಿ.ಜೆ.ಗಿರೀಶ್, ಸಮಾಜ ಸೇವಕ ರವಿಕಾಂತೇಗೌಡ, ಸಿನಿಮಾ ನಿರ್ಮಾಪಕ ದಿನೇಶ್ ನಾಚಪ್ಪ ಇತರರು ಹಾಜರಿದ್ದರು.